ರಾಷ್ಟ್ರೀಯ

4ನೇ ದಿನವೂ ಪೆಟ್ರೋಲ್‌, ಡೀಸಿಲ್‌ ದರ 9 ಪೈಸೆ ಇಳಿಕೆ

Pinterest LinkedIn Tumblr


ಹೊಸದಿಲ್ಲಿ : ನಿರಂತರ ನಾಲ್ಕನೇ ದಿನವಾಗಿ ಇಂದು ಶನಿವಾರ ಕೂಡ ಪೆಟ್ರೋಲ್‌ ಮತ್ತು ಡೀಸಿಲ್‌ ದರಗಳು ಇಳಿದಿವೆ.

ಅಂತಾರಾಷ್ಟ್ರೀಯ ಕಚ್ಚಾ ತೈಲ ಬೆಲೆ ಕೊಂಚ ಪ್ರಮಾಣದಲ್ಲಿ ಇಳಿದಿರುವುದೇ ಇದಕ್ಕೆ ಕಾರಣವೆಂದು ಹೇಳಲಾಗಿದೆ.

ಇಂದು ಶನಿವಾರ ಪೆಟ್ರೋಲ್‌ ಮತ್ತು ಡೀಸಿಲ್‌ ಲೀಟರ್‌ ಬೆಲೆ 9 ಪೈಸೆಯಷ್ಟು ಕಡಿಮೆಯಾಗಿದೆ.

ದಿಲ್ಲಿಯಲ್ಲಿ ಶುಕ್ರವಾರ 78.29 ರೂ. ಇದ್ದ ಲೀಟರ್‌ ಪೆಟ್ರೋಲ್‌ ದರ ಇಂದು 9 ಪೆಸೆಯಷ್ಟು ಇಳಿದು 78.20 ರೂ ಆಗಿದೆ. ಇದೇ ರೀತಿ ನಿನ್ನೆ 69.20 ರೂ. ಇದ್ದ ಡೀಸಿಲ್‌ ಲೀಟರ್‌ ಬೆಲೆ ಇಂದು 68.11 ರೂ.ಗೆ ಇಳಿದಿದೆ.

ಕೋಲ್ಕತಾದಲ್ಲಿ ಪೆಟ್ರೋಲ್‌ ಲೀಟರ್‌ ಬೆಲೆ 80.84, ಮುಂಬಯಿಯಲ್ಲಿ 86.01 ಮತ್ತು ಚೆನ್ನೈನಲ್ಲಿ 81.19 ರೂ. ಇದೆ. ಡೀಸಿಲ್‌ ಲೀಟರ್‌ ಬೆಲೆ ಕೋಲ್ಕತಾದಲ್ಲಿ 71.66, ಮುಂಬಯಿಯಲ್ಲಿ 73.58 ಮತ್ತು ಚೆನ್ನೈನಲ್ಲಿ 72.97 ರೂ. ಇದೆ.

Comments are closed.