ಮುಂಬಯಿ: ವಿಶ್ವದ ಮೊದಲ ಮಹಿಳಾ ವಿಶೇಷ ಟ್ರೈನ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿ ಪಶ್ಚಿಮ ರೈಲ್ವೆಯಲ್ಲಿನ ಚರ್ಚ್‌ಗೇಟ್ ಮತ್ತು ಬೊರಿವಲಿ ಸ್ಟೇಶನ್‌ಗಳ ನಡುವೆ ಓಡಾಡುತ್ತಿದ್ದ ರೈಲು ಇಂದು 26 ವರ್ಷಗಳ ಸೇವೆಯನ್ನು ಪೂರೈಸುತ್ತಿದೆ ಎಂದು ಅಧಿಕಾಗಳು ತಿಳಿಸಿದ್ದಾರೆ.
ವಿಶ್ವದ ಈ ಮೊದಲ ಮಹಿಳಾ ಸ್ಪೆಶಲ್ ರೈಲನ್ನು 1992ರ ಮೇ 5ರಂದು ಪರಿಚಯಿಸಲಾಗಿತ್ತು. ಚರ್ಚ್‌ಗೇಟ್ ಮತ್ತು ಬೊರಿವಲಿ ಸ್ಟೇಶನ್‌ಗಳ ನಡುವೆ ಮಹಿಳಾ ಪ್ರಯಾಣಿಕರನ್ನು ಮಾತ್ರವೇ ಒಯ್ಯುವ ಈ ರೈಲು ಹೊರವಲಯದ ಸೇವೆಗಾಗಿ ಮಹಿಳೆಯರಲ್ಲಿ ಜನಪ್ರಿಯವಾಗಿತ್ತು.
ಆರಂಭದಲ್ಲಿ ಈ ರೈಲು ದಿನಕ್ಕೆ ಕೇವಲ ಎರಡನೇ ಯಾನಗಳನ್ನು ಕೈಗೊಳ್ಳುತ್ತಿತ್ತು. ಈಗ ಈ ರೈಲು ದಿನಕ್ಕೆ ಎಂಟು ಓಡಾಟಗಳನ್ನು (ಬೆಳಗ್ಗೆ ಮತ್ತು ಸಂಜೆಯ ಪೀಕ್ ಅವರ್‌ಗಳಲ್ಲಿ ತಲಾ 4 ಓಡಾಟ) ಕೈಗೊಳ್ಳುತ್ತಿದೆ.
-Udayavani
Comments are closed.