ಮುಂಬೈ

ಮಹಾರಾಷ್ಟ್ರದಲ್ಲಿ ಎನ್’ಸಿಪಿ ಪಕ್ಷದ ಇಬ್ಬರು ಕಾರ್ಯಕರ್ತರ ಬರ್ಬರ ಹತ್ಯೆ

Pinterest LinkedIn Tumblr

ಮುಂಬೈ; ಮಹಾರಾಷ್ಟ್ರದಲ್ಲಿ ಎನ್’ಸಿಪಿ ಪಕ್ಷದ ಇಬ್ಬರು ಕಾರ್ಯಕರ್ತರನ್ನು ನಡು ರಸ್ತೆಯಲ್ಲಿ ಗುಂಡಿಟ್ಟು ಹತ್ಯೆ ಮಾಡಿರುವ ಘಟನೆ ಭಾನುವಾರ ನಡೆದಿದೆ.

ಯೋಗೇಶ್ ರಾಲೇಭಟ್ (29) ಮತ್ತು ರಾಕೇಶ್ ರಾಲೇಭಟ್ (28) ಹತ್ಯೆಗೀಡಾದ ಎನ್’ಸಿಪಿ ಕಾರ್ಯಕರ್ತರಾಗಿದ್ದಾರೆ.

ಹತ್ಯೆಯಾದ ಯೋಗೇಸ್ ಅವರು ಎನ್’ಸಿಪಿ ಯುವ ಘಟಕದ ಜಿಲ್ಲಾ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.

ನಿನ್ನೆ ಸಂಜೆ 6.45ರ ಸುಮಾರಿಗೆ ಬೈಕ್ ನಲ್ಲಿ ಬಂದ ದುಷ್ಕರ್ಮಿಗಳು ಅಂಗಡಿ ಮುಂದೆ ಕುಳಿತಿದ್ದ ಯೋಗೇಶ್ ಹಾಗೂ ರಾಕೇಶ್ ಅವರ ಮೇಲೆ ಏಕಾಏಕಿ ಗುಂಡಿನ ದಾಳಿ ನಡೆಸಿ ಸ್ಥಳದಿಂದ ಕಾಲ್ಕಿತ್ತಿದ್ದಾರೆ.

ಗುಂಡಿನ ದಾಳಿಯಿಂದಾಗಿ ರಕ್ತದ ಮಡುವಿನಲ್ಲಿ ಬಿದ್ದು ಒದ್ದಾಡುತ್ತಿದ್ದ ರಾಕೇಶ್ ಹಾಗೂ ಯೋಗೇಶ್ ಅವರನ್ನು ಸ್ಥಳೀಯರು ಆಸ್ಪತ್ರೆಗೆ ಸಾಗಿಸಿದ್ದಾರೆ. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಇಬ್ಬರೂ ಕೊನೆಯುಸಿರೆಳೆದಿದ್ದಾರೆಂದು ತಿಳಿದುಬಂದಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪ್ರಸ್ತುತ ತನಿಖೆ ಆರಂಭಿಸಿದ್ದಾರೆ.

3 ವಾರಗಳ ಹಿಂದಷ್ಟೇ ಇದೇ ರೀತಿಯದ್ದೇ ಮತ್ತೊಂದು ಘಟನೆ ನಡೆದಿತ್ತು. ಶಿವಸೇನೆಯ ಇಬ್ಬರು ಕಾರ್ಯಕರ್ತರನ್ನು ಗುಂಡಿಟ್ಟು ಹತ್ಯೆ ಮಾಡಲಾಗಿತ್ತು. ಈ ಘಟನೆ ಮಾಸುವ ಮುನ್ನವೇ ಎನ್’ಸಿಪಿ ಕಾರ್ಯಕರ್ತನ್ನು ಹತ್ಯೆ ಮಾಡಲಾಗಿದೆ.

Comments are closed.