ಕ್ರೀಡೆ

ಗಂಭೀರ್ ಅವಕಾಶ ವಂಚಿತರಾಗಲು ಆತನ ಕೋಪವೇ ಕಾರಣ: ಹಿರಿಯ ಮಾಜಿ ಕ್ರಿಕೆಟಿಗ ಸಂದೀಪ್ ಪಾಟೀಲ್

Pinterest LinkedIn Tumblr

ನವದೆಹಲಿ: ಭಾರತ ತಂಡದ ಕ್ರಿಕೆಟಿದ ಗೌತಮ್ ಗಂಭೀರ್ ತನ್ನ ವರ್ತನೆಯಿಂದಾಗಿಯೇ ತಂಡದಲ್ಲಿ ಅವಕಾಶ ವಂಚಿತನಾಗಿದ್ದ ಎಂದು ಮಾಜಿ ಕ್ರಿಕೆಟಿಗ ಹಾಗೂ ಮಾಜಿ ಆಯ್ಕೆ ಸಮಿತಿ ಅಧ್ಯಕ್ಷ ಸಂದೀಪ್ ಪಾಟೀಲ್ ಹೇಳಿದ್ದಾರೆ.

ವೆಬ್ ಸೈಟ್ ವೊಂದಕ್ಕೆ ಸಂದರ್ಶನ ನೀಡಿರುವ ಸಂದೀಪ್ ಪಾಟೀಲ್ ಗಂಭೀರ್ ಬಗ್ಗೆ ಮಾತನಾಡುತ್ತಾ, ಗಂಭೀರ್ ತನ್ನ ವರ್ತನೆಯಿಂದಾಗಿಯೇ ಸಾಕಷ್ಟು ಬಾರಿ ತಂಡದಲ್ಲಿ ಸ್ಥಾನ ಪಡೆಯುವ ಅವಕಾಶದಿಂದ ವಂಚಿತನಾಗಿದ್ದಾನೆ, ಆತ ತಂಡದಿಂದ ಡ್ರಾಪ್ ಅಗಲು ಆತನ ಕೋಪವೇ ಕಾರಣ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಇದೇ ವೇಳೆ, ಭಾರತ ಕ್ರಿಕೆಟ್‌ ತಂಡದಲ್ಲಿ ಯೋಗ್ಯತೆಗೆ ತಕ್ಕಷ್ಟು ಮರ್ಯಾದೆ ಗಳಿಸದ ಕ್ರಿಕೆಟಿಗನೆಂದರೆ ಗೌತಮ್‌ ಗಂಭೀರ್‌ ಮಾತ್ರ ಎಂದೂ ಪಾಟೀಲ್ ಅಭಿಪ್ರಾಯ ಪಟ್ಟಿದ್ದಾರೆ. 2011, 2007ರ ವಿಶ್ವಕಪ್‌ನಲ್ಲಿ ತಂಡ ಗೆಲ್ಲಲು ಗಂಭೀರ್‌ ಕೊಡುಗೆ ನಿರ್ಣಾಯಕವಾಗಿತ್ತು. ಆದರೂ ಅವರು ಭಾರತ ತಂಡದಿಂದ ಹೊರ ಬೀಳಲು ಕಾರಣ ಅವರ ಸ್ವಭಾವ. ಅವರು ಭಾರತ ತಂಡದಿಂದ ಹೊರಬೀಳಲು ಮುಖ್ಯ ಕಾರಣ ಅವರಲ್ಲಿ ಹೆಚ್ಚುತ್ತಿದ್ದ ಸಿಟ್ಟು.

ಅದೇ ಕಾರಣಕ್ಕೆ ನಾನವರನ್ನು ಭಾರತ ತಂಡದ ಅಮಿತಾಭ್‌ ಬಚ್ಚನ್‌ ಎಂದು ಕರೆದಿದ್ದೆ. 2011ರಲ್ಲಿ ಅವರು ಇಂಗ್ಲೆಂಡ್‌ನ‌ಲ್ಲಿ ಗಾಯಗೊಂಡಿದ್ದರು. ಅವರ ಗಾಯ ಗಂಭೀರವಲ್ಲ ಎಂದು ಸ್ಕ್ಯಾನಿಂಗ್‌ ವರದಿಗಳು ಹೇಳಿದ್ದವು. ಆದರೂ ಗಂಭೀರ್‌ ಆಡದಿರಲು ನಿರ್ಧರಿಸಿದರು. ಅದು ಅವರಿಗೆ ಋಣಾತ್ಮಕವಾಗಿ ಪರಿಣಮಿಸಿತು. ಅವರ ಜಾಗಕ್ಕೆ ಬಂದ ಶಿಖರ್‌ ಧವನ್‌ ಅತ್ಯುತ್ತಮವಾಗಿ ಆಡಿದ ನಂತರ ಗಂಭೀರ್‌ ಶಾಶ್ವತವಾಗಿ ಸ್ಥಾನ ಕಳೆದುಕೊಂಡರು.

ಬಹುಶಃ ಗಂಭೀರ್ ಇಂದಿಗೂ ನನ್ನ ವಿರುದ್ಧ ಅಸಮಾಧಾನಗೊಂಡಿರಬಹುದು ಎಂದು ಪಾಟೀಲ್‌ ಅಭಿಪ್ರಾಯಪಟ್ಟಿದ್ದಾರೆ.

Comments are closed.