ಮುಂಬೈ

ಮುಂಬೈನ ಕಂಡಿವಲಿಯಲ್ಲಿ ಶಿವಸೇನೆ ಮುಖಂಡನ ಗುಂಡಿಕ್ಕಿ ಹತ್ಯೆಗೈದ ಇಬ್ಬರು ದುಷ್ಕರ್ಮಿಗಳು

Pinterest LinkedIn Tumblr

ಮುಂಬೈ: ಶಿವಸೇನೆ ಮುಖಂಡ ಸಚಿನ್ ಸಾವಂತ್ ಅವರನ್ನು ಮುಂಬೈನ ಕಂಡಿವಲಿಯ ಗೋಕುಲ್ ನಗರದಲ್ಲಿ ಭಾನುವಾರ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ.

40 ವರ್ಷದ ಶಿವಸೇನಾ ನಾಯಕ ರಾತ್ರಿ 8 ಗಂಟೆಯ ಸುಮಾರಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಇಬ್ಬರು ದುಷ್ಕರ್ಮಿಗಳು ಅವರ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಉದಯ್ ಕುಮಾರ್ ರಾಜಶಿರ್ಕೆ ಅವರು ತಿಳಿಸಿದ್ದಾರೆ.

ದುಷ್ಕರ್ಮಿಗಳು ಸಾವಂತ್ ಅವರ ಕಾರು ತಡೆದು ಅವರ ಮೇಲೆ ನಾಲ್ಕು ಸುತ್ತು ಗುಂಡು ಹಾರಿಸಿ ಪರಾರಿಯಾಗಿದ್ದಾರೆ. ದಾಳಿಯಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಸಾವಂತ್ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಆದರೆ ದಾರಿ ಮಧ್ಯಯೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದ್ದಾರೆ. ಕಂಡಿವಲಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

Comments are closed.