ಕ್ರೀಡೆ

ರಾಜಸ್ಥಾನಕ್ಕೆ ರೋಚಕ ಗೆಲುವು ತಂದುಕೊಟ್ಟ ಕನ್ನಡಿಗ ! ಮುಂಬೈ ಇಂಡಿಯನ್ಸ್’ಗೆ ಸೋಲು

Pinterest LinkedIn Tumblr

ಜೈಪುರ: ಕನ್ನಡಿಗ ಕೃಷ್ಣಪ್ಪ ಗೌತಮ್ ಭರ್ಜರಿ ಆಟದ ನೆರವಿನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್ ಮೂರು ವಿಕೆಟುಗಳ ರೋಚಕ ಗೆಲುವು ದಾಖಲಿಸಿದೆ.

ಇಂದು ಜೈಪುರದ ಸವಾಯ್ ಮಾನ್ ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಮೊದಲು ಬ್ಯಾಟಂಗ್ ಮಾಡಿದ ಮುಂಬೈ ಇಂಡಿಯನ್ಸ್ ತಂಡ ನಿಗದಿತ 20 ಓವರ್ ಗಳಲ್ಲಿ ಏಳು ವಿಕೆಟ್​ ನಷ್ಟಕ್ಕೆ 167ರನ್​ಗ ಗಳಿಸಿತ್ತು.

ಗೆಲುವಿಗೆ 168 ರನ್ ಗಳ ಗುರಿ ಬೆನ್ನತ್ತಿದ ರಾಜಸ್ಥಾನ ರಾಯಲ್ಸ್ ತಂಡ, ಸಂಜು ಸ್ಯಾಮ್ಸನ್(52)​ ಬೆನ್ ಸ್ಟೋಕ್ಸ್​ (40) ಸಮಯೋಚಿತ ಆಟ ಹಾಗೂ ಸ್ಫೋಟಕ 33ರನ್ ಗಳ ನೆರವಿನೊಂದಿಗೆ ಮೂರು ವಿಕೆಟ್ ಗಳ ಜಯ ದಾಖಲಿಸಿತು.

ಗೌತಮ್ ಕ್ರೀಸಿಗಿಳಿದಾಗ ತಂಡದ ಗೆಲುವಿಗೆ 17 ಎಸೆತಗಳಲ್ಲಿ 43 ರನ್‌ಗಳ ಅಗತ್ಯವಿತ್ತು. ಆದರೆ ಮೂರು ಬೌಂಡರಿ ಹಾಗೂ ಎರಡು ಸಿಕ್ಸರ್ ಸೇರಿದಂತೆ ಕೇವಲ 11 ಎಸೆತಗಳಲ್ಲಿ ಅಜೇಯ 33 ರನ್ ಚಚ್ಚಿದ ಗೌತಮ್ ರಾಜಸ್ಥಾನಕ್ಕೆ ರೋಚಕ ಗೆಲುವು ಒದಗಿಸಿಕೊಟ್ಟರಲ್ಲದೆ ನೈಜ ಹೀರೊ ಎನಿಸಿಕೊಂಡರು.

ಇದರೊಂದಿಗೆ ಸತತ ಎರಡು ಸೋಲುಗಳ ಬಳಿಕ ರಾಜಸ್ಥಾನ ಗೆಲುವಿನ ಹಾದಿಗೆ ಮರಳಿದೆ.

Comments are closed.