ಮುಂಬಯಿ: 2.5 ಲಕ್ಷ ಕಳ್ಳತನದ ಪ್ರಕರಣದ ಪ್ರಮುಖ ಆರೋಪಿಯಾಗಿರುವ ಮೊದಲಿಯಾರ್ ತನಗೆ ಹಿಂದಿ ಮಾತನಾಡಲು ಬರುವುದೇ ಇಲ್ಲ ಎಂದು ಪೊಲೀಸರ ಮುಂದೆ ಡ್ರಾಮಾ ಮಾಡುತ್ತಿದ್ದ. ಜತೆಗೆ ತಮಿಳಿನಲ್ಲಿ ಗೊಂದಲ ಹುಟ್ಟಿಸುವ ಧಾಟಿಯಲ್ಲಿ ಮಾತನಾಡುತ್ತಿದ್ದ. ತನಿಖೆ ಸ್ವಲ್ಪವೂ ಪ್ರಗತಿ ಕಾಣದಿದ್ದಾಗ ತಲೆ ಕೆಡಿಸಿಕೊಂಡಿದ್ದ ಪೊಲೀಸರು ಶಕ್ತಿಯಿಂದಾಗದ ಪ್ರಕರಣವನ್ನು ಯುಕ್ತಿಯಿಂದ ಬೇಧಿಸುವಲ್ಲಿ ಕೊನೆಗೂ ಯಶ ಕಂಡಿದ್ದಾರೆ.
ಆತನ ಮೂವರು ಮಕ್ಕಳು ಉತ್ತಮ ಸ್ಥಾನಗಳಲ್ಲಿದ್ದು ಮೊದಲ ಮಗ ಮರೀನ್ ಎಂಜಿನಿಯರ್ ಆಗಿದ್ದಾನೆ. ಎರಡನೆಯವನು ವೈದ್ಯನಾಗಿದ್ದು ಸರ್ಜರಿಯಲ್ಲಿ ಸ್ನಾತಕೋತ್ತರ ಪದವಿ ಅಭ್ಯಸಿಸುತ್ತಿದ್ದರೆ, ಮೂರನೆಯವನು ಹೋಟೆಲ್ ಮ್ಯಾನೇಜ್‌ಮೆಂಟ್ ಓದುತ್ತಿದ್ದಾನೆ. ಬಾಯ್ಬಿಡದಿದ್ದರೆ ಈ ಮೂವರಿಗೆ ಸಮನ್ಸ್ ಕೊಡುವುದಾಗಿ ಪೊಲೀಸರು ಮೊದಲಿಯಾರ್‌ಗೆ ಬೆದರಿಸಿದ್ದಾರೆ. ಭಾವುಕನಾದ ಗ್ಯಾಂಗ್ ಲೀಡರ್ ಆ ಕೆಲಸವನ್ನು ಮಾಡಬೇಡಿ ಎಂದು ಗೋಗರೆಯುತ್ತ ಸ್ಪಷ್ಟ ಹಿಂದಿಯಲ್ಲಿ ಮಾತನಾಡಲು ಪ್ರಾರಂಭಿಸಿದ ಎಂದು ಪೊಲೀಸರು ತಿಳಿಸಿದ್ದಾರೆ.
ದಿಲ್ಲಿಯಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದ ಟಕ್ ಟಕ್ ಗ್ಯಾಂಗ್, ಕಾರಿನಲ್ಲಿ ಹೋಗುವವರನ್ನೇ ಟಾರ್ಗೆಟ್ ಮಾಡುತ್ತಿತ್ತು. ಚಲಿಸುತ್ತಿದ್ದ ಕಾರಿನ ಗಾಜಿನ ಮೇಲೆ ಟಕ್ ಟಕ್ ಎಂದು ಬಡಿದು ನಿಮಗೆ ಏನೋ ಹೇಳಲಿಕ್ಕಿದೆ ಎಂದು ಸಹಾಯ ಮಾಡುವವರಂತೆ ಕಾಣಿಸಿಕೊಳ್ಳುತ್ತಿತ್ತು. ಈ ಖದೀಮರ ಕರೆಗೆ ಓಗೊಟ್ಟು ಕಾರಿನ ಚಾಲಕ ಹೊರ ಬಂದನೆಂಬರೆ, ಗ್ಯಾಂಗ್‌ನ ಒಂದಷ್ಟು ಸದಸ್ಯರು ಮರಳು ಮಾಡುತ್ತಿದ್ದರು. ಇನ್ನಷ್ಟು ಜನ ಕಾರಿಗೆ ನುಗ್ಗಿ ಇದ್ದಬದ್ದ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು.
Comments are closed.