ಮುಂಬೈ

800 ಅಡಿ ಆಳದ ಪ್ರಪಾತಕ್ಕೆ ಬಿದ್ದ ಗರ್ಭಿಣಿ, ಅದೃಷ್ಟವಶಾತ್‌ ಪಾರು

Pinterest LinkedIn Tumblr


ಮುಂಬಯಿ: ಮುಂಬಯಿ ಸಮೀಪದ ಮಾತೆರಾನ್ ಎಂಬಲ್ಲಿ ರೈಲು ಹಳಿಗಳ ಪಕ್ಕದಲ್ಲಿ ನಡೆಯುತ್ತಿದ್ದ 6 ತಿಂಗಳ ಗರ್ಭಿಣಿ ವಿಜಯಾ ಪವಾರ್‌ (25) 800 ಅಡಿ ಆಳದ ಕಂದಕಕ್ಕೆ ಬಿದ್ದ ಘಟನೆ ನಡೆದಿದೆ.

ಅದೃಷ್ಟವಶಾತ್‌ 80 ಅಡಿ ಆಳದಲ್ಲಿ ಎಲೆಗಳ ರಾಶಿಯ ಮೇಲೆ ಬಿದ್ದುದರಿಂದ ಪ್ರಾಣಾಪಾಯದಿಂದ ಪಾರಾಗಿದ್ದಾಳೆ. ಸ್ಥಳೀಯರು ಮಹಿಳೆಯನ್ನು ರಕ್ಷಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಬಳಿಕ ಮುಂಬಯಿಯ ಜೆ.ಜೆ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು.

ಈಗ ಆಕೆ ಅಪಾಯದಿಂದ ಪಾರಾಗಿದ್ದಾಳೆ. ಬೆನ್ನಿಗೆ ಏಟು ಬಿದ್ದಿದ್ದರೂ ಗರ್ಭಪಾತದ ಅಪಾಯದಿಂದ ಪಾರಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಭಾನುವಾರದಂದು ವಿಜಯಾ ಮತ್ತುಆಕೆಯ ಪತಿ ಸುರೇಶ್‌ ಪವಾರ್‌ ದೇವಸ್ಥಾನಕ್ಕೆ ತೆರಳುವಾಗ ಈ ಘಟನೆ ನಡೆದಿದೆ.

ಮೂಲ ವರದಿ: ಮಹಾರಾಷ್ಟ್ರ ಟೈಮ್ಸ್‌

Comments are closed.