ಮುಂಬೈ

ಬ್ಯಾಂಕುಗಳಿಗೆ 4000 ಕೋಟಿ ರು ಪಂಗನಾಮ: ಮುಂಬಯಿಯ ಕಂಪನಿಯೊಂದರ ಮೂರು ನಿರ್ದೇಶಕರ ಬಂಧನ

Pinterest LinkedIn Tumblr


ಮುಂಬಯಿ: ನೀರವ್‌ ಮೋದಿ ಹಾಗು ಮೇಹುಲ್‌ ಚೋಕ್ಸಿ ಪಂಜಾಬ್‌ ನ್ಯಾಷನಲ್ ಬ್ಯಾಂಕ್‌ಗೆ ಪಂಗನಾಮ ಹಾಕಿದ ಪ್ರಹಸನ ಬಳಿಕ ಇನ್ನೊಂದು ಬ್ಯಾಂಕಿಂಗ್‌ ಕಾಂಡದಲ್ಲಿ ಮುಂಬಯಿಯ ಖಾಸಗಿ ಕಂಪನಿಯೊಂದರ ಮೂರು ನಿರ್ದೇಶಕರನ್ನು ಬಂಧಿಸಲಾಗಿದೆ.

ಪರೇಖ್‌ ಅಲ್ಲೂಮಿನೆಕ್ಸ್ ಲಿ ಎಂಬ ಸಂಸ್ಥೆಯಿಂದ ತಮಗೆ 4,000 ಕೊಟಿ ರುಗಳಷ್ಟು ಹಣ ಮರಳಿ ಬರಬೇಕಿದೆ ಎಂದು ಸಾಲ ಕೊಟ್ಟವರು ದೂರು ನೀಡಿದ್ದಾರೆ.

ಇದೇ ವಿಚಾರವಾಗಿ ಭವರ್ಲಾಲ್‌ ಭಂಡಾರಿ, ಪ್ರೇಮಲ್‌ ಗೊರಗಾಂಧಿ ಹಾಗು ಕಮಲೇಶ್‌ ಕನುಂಗೋ ಎಂಬ ಮೂವರನ್ನು ಆರ್ಥಿಕ ಅಪರಾಧ ದಳ ಬಂಧಿಸಿದ್ದು. ತನಗೆ 250 ಕೋಟಿ ರುಗಳ ವಂಚನೆ ಮಾಡಲಾಗಿದೆ ಎಂದು ಆಕ್ಸಿಸ್‌ ಬ್ಯಾಂಕ್‌ ನೀಡಿದ್ದ ದೂರಿನ ಅನ್ವಯ ವಂಚನೆ, ನಕಲು ಮಾಡುವಿಕೆ, ನಂಬಿಕೆ ದ್ರೋಹ ಹಾಗು ಅಪರಾಧಕ್ಕೆ ಸಂಚು ರೂಪಿಸಿದ ವಿಚಾರವಾಗಿ ಪ್ರಕರಣ ದಾಖಲಿಸಲಾಗಿದೆ.

ಸಂಸ್ಥೆಗೆ ಸಾಲ ನೀಡಿದ್ದ 20 ಸಂಸ್ಥೆಗಳ ಪೈಕಿ ಆಕ್ಸಿಸ್‌ ಬ್ಯಾಂಕ್‌ ಕೂಡ ಒಂದಾಗಿದೆ. ಬೋಗಸ್‌ ಕಂನಿಗಳ ಮೂಲಕ ನಕಲಿ ಬಿಲ್‌ಗಳನ್ನು ಸೃಷ್ಟಿಸಿ ಆಕ್ಸಿಸ್‌ ಬ್ಯಾಂಕ್‌ನ ಫೋರ್ಟ್‌ ಮುಂಬಯಿ ಶಾಖೆಯಲ್ಲಿ ವಂಚನೆಯೆಸಗಿದ್ದಾರೆ.

ಪ್ರಕರಣದಲ್ಲಿ ಬ್ಯಂಕ್‌ ಅಧಿಕಾರಿಗಳ ಪಾತ್ರವನ್ನು ಪೊಲೀಸರು ತಳ್ಳಿಹಾಕಿಲ್ಲ. ಅಲ್ಯುಮಿನಿಯಮ್‌ ಶೀಟ್‌ಗಳ ವ್ಯಾಪಾರಕ್ಕೆ ಹೆಸರಾಗಿರುವ ಪರೇಖ್‌ ಅಲ್ಯಮಿನೆಕ್ಸ್‌ , 2011ರಲ್ಲಿ 127. 5 ಕೋಟಿ ರುಗಳಷ್ಟು ಸಾಲ ಪಡೆಯಲು ಆಕ್ಸಿಸ್‌ ಬ್ಯಾಂಕ್‌ನ ಶಾಖೆಯಿಂದ ವಿಶ್ವಾಸಾರ್ಹತೆ ಪತ್ರ ಪಡೆದಿತ್ತು.

ಇದೇ ಸಂಸ್ಥೆ ವಿರುದ್ಧ ಭಾರತೀಯ ಸ್ಟೇಟ್‌ ಬ್ಯಾಂಕ್‌ ಹಾಗು ಇಂಡಿಯನ್‌ ಓವರ್‌ಸೀಸ್‌ ಬ್ಯಾಂಕ್‌ಗಳು ನೀಡಿರುವ ದೂರಿನ ಅನ್ವಯ ಕೇಂದ್ರ ತನಿಖಾ ದಳ(ಸಿಬಿಐ) ತನಿಖೆ ನಡೆಸುತ್ತಿದೆ. ಸಾಲದ ಹಣವನ್ನು ರಿಯಲ್‌ ಎಸ್ಟೇಟ್‌ ದಂಧಗೆ ಬಳಸಿದ ದೂರು ಸಂಸ್ಥೆ ಮೇಲಿದೆ.

Comments are closed.