ಮುಂಬೈ

ಪಿಎನ್‌ಬಿ ಹಗರಣ: ಎಲ್ಲ 11 ಆರೋಪಿಗಳಿಗೆ ನ್ಯಾಯಾಂಗ ಬಂಧನ

Pinterest LinkedIn Tumblr


ಮುಂಬಯಿ: ಬಹುಕೋಟಿ ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ವಂಚನೆ ಪ್ರಕರಣದಲ್ಲಿ ಬಂಧಿತರಾಗಿರುವ 11 ಆರೋಪಿಗಳನ್ನು ಶನಿವಾರ ಇಲ್ಲಿನ ವಿಶೇಷ ನ್ಯಾಯಾಲಯ 11 ದಿನಗಳ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ವಜ್ರಾಭರಣ ವ್ಯಾಪಾರಿ ನೀರವ್‌ ಮೋದಿ ಹಾಗೂ ಆತನ ಚಿಕ್ಕಪ್ಪ ಮೆಹುಲ್‌ ಚೋಕ್ಸಿ ಒಡೆತನದ ಕಂಪನಿಗಳು ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ (ಪಿಎನ್‌ಬಿ)ನ ಕೆಲವು ಅಧಿಕಾರಿಗಳ ಪರೋಕ್ಷ ಒಪ್ಪಿಗೆ ಮೇರೆಗೆ ಬ್ಯಾಂಕ್‌ನಿಂದ 13 ಸಾವಿರ ಕೋಟಿ ರೂಪಾಯಿಗಳಿಗೂ ಹೆಚ್ಚಿನ ಮೊತ್ತದ ಸಾಲ ಖಾತ್ರಿ ಪತ್ರ (ಎಲ್‌ಒಯು) ಹಾಗೂ ಸಾಲ ಪತ್ರ (ಎಲ್‌ಸಿ)ಗಳನ್ನು ಅಕ್ರಮವಾಗಿ ಪಡೆದಿವೆ. ಈ ಮೂಲಕ ಪಿಎನ್‌ಬಿಗೆ ನೀರವ್‌ ಕಂಪನಿಗಳು 6,500 ಕೋಟಿ ರೂಪಾಯಿ ಹಾಗೂ ಚೋಕ್ಸಿ ಕಂಪನಿಗಳು 7,080 ಕೋಟಿ ರೂಪಾಯಿ ಪಂಗನಾಮ ಹಾಕಿವೆ.

ಪಿಎನ್‌ಬಿಯ ಮಾಜಿ ಉಪಪ್ರಧಾನ ವ್ಯವಸ್ಥಾಪಕ ಗೋಕುಲನಾಥ್‌ ಶೆಟ್ಟಿ , ಏಕಗವಾಕ್ಷಿ ನಿರ್ವಾಹಕ ಮನೋಜ್‌ ಖಾರಟ್‌, ಮೋದಿ ಕಂಪನಿಯ ಅಧಿಕೃತ ರುಜುದಾರ ಹೇಮಂತ್‌ ಭಟ್‌, ಪಿಎನ್‌ಬಿಯ ವಿದೇಶಿ ವಿನಿಮಯ ಇಲಾಖೆಯ ಆಗಿನ ಪ್ರಧಾನ ಪ್ರಬಂಧಕ ಬೆಚ್ಚು ತಿವಾರಿ ಸೇರಿದಂತೆ ಬಂಧಿತ ಎಲ್ಲ 11 ಜನರನ್ನೂ ಶನಿವಾರ ವಿಶೇಷ ಸಿಬಿಐ ನ್ಯಾಯಾಲಯದಲ್ಲಿ ಹಾಜರುಪಡಿಸಲಾಗಿತ್ತು.

Comments are closed.