ರಾಷ್ಟ್ರೀಯ

ಹೈದರಾಬಾದ್‌ ವಿವಿ: ಕ್ಯಾಂಪಸ್‌ನಲ್ಲೇ ವಿದ್ಯಾರ್ಥಿನಿಯ ರೇಪ್‌ ಯತ್ನ

Pinterest LinkedIn Tumblr


ಹೈದರಾಬಾದ್‌: ಹೈದರಾಬಾದ್‌ ಯೂನಿವರ್ಸಿಟಿಯ ಕ್ಯಾಂಪಸ್‌ನೊಳಗೆ ನಾಲ್ವರು ಅಪ್ರಾಪ್ತ ವಯಸ್ಕ ಬಾಲಕರು ವಿದ್ಯಾರ್ಥಿನಿಯೊಬ್ಬಳ ಅತ್ಯಚಾರಕ್ಕೆ ಯತ್ನಿಸಿದ ಕಳವಳಕಾರಿ ಘಟನೆ ಶುಕ್ರವಾರ ನಡೆದಿದೆ.

ಕ್ಯಾಂಪಸ್‌ನ ನಿರ್ಬಂಧಿತ ಪ್ರದೇಶದಲ್ಲಿ ಸ್ನೇಹಿತನೊಂದಿಗೆ ಇದ್ದ ವಿದ್ಯಾರ್ಥಿನಿಯ ಮೇಲೆ ಮೂವರು ಬಾಲಕರು ಅತ್ಯಾಚಾರಕ್ಕೆ ಯತ್ನಿಸಿದ್ದು , ಜೋಡಿ ಸಣ್ಣ ಪುಟ್ಟ ಗಾಯಗಳೊಂದಿಗೆ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ತಪ್ಪಿಸಿಕೊಂಡು ವಿವಿ ಸಿಬಂದಿಯ ಗಮನಕ್ಕೆ ವಿಚಾರ ತಂದಿದ್ದು , ಪೊಲೀಸರಿಗೆ ದೂರು ನೀಡಲಾಗಿದೆ. ದೂರು ದಾಖಲಿಸಿಕೊಂಡ ಗಚಿಬೌಲಿ ಠಾಣಾ ಪೊಲೀಸರು 16 ವರ್ಷ ಪ್ರಾಯದ ಮೂವರು ಮತ್ತು 17 ವರ್ಷ ಪ್ರಾಯದ ಓರ್ವ ಆರೋಪಿಗಳನ್ನು ವಶಕ್ಕೆ ಪಡೆದಿದ್ದಾರೆ. ಬಂಧಿತರು ಕಟ್ಟಡ ಕಾಮಗಾರಿಗೆ ಬಂದ ಕೆಲಸಗಾರರು ಎನ್ನಲಾಗಿದೆ.

ವಿವಿ ಅಧಿಕಾರಿಗಳು ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು ಘಟನೆ ಕ್ಯಾಂಪಸ್‌ನ ಹೊರಗೆ ನಡೆದಿದೆ ಎಂದಿದ್ದು, ಆ ಪ್ರದೇಶ ನಿರ್ಬಂಧಿತವಾಗಿತ್ತು ಎಂದಿದ್ದಾರೆ.

-ಉದಯವಾಣಿ

Comments are closed.