ರಾಷ್ಟ್ರೀಯ

ಗೋವಾ ಮುಖ್ಯಮಂತ್ರಿ ವಾಪಸಿಗೆ ಇನ್ನೂ ತಿಂಗಳು ಬೇಕು

Pinterest LinkedIn Tumblr


ತೀವ್ರ ಅನಾರೋಗ್ಯಕ್ಕೆ ತುತ್ತಾಗಿ ಅಮೆರಿಕದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗೋವಾ ಮುಖ್ಯಮಂತ್ರಿ ಮನೋಹರ್‌ ಪಾರಿಕ್ಕರ್‍ ಕನಿಷ್ಟ ಇನ್ನೂ ಒಂದು ತಿಂಗಳು ಅಲ್ಲಿಯೇ ಇರಬೇಕಾಗಿದೆ.

ಸದ್ಯ ಚಿಕಿತ್ಸೆಗೆ ಅವರು ಸೂಕ್ತ ರೀತಿಯಲ್ಲಿ, ಸಕಾರಾತ್ಮಕವಾಗಿ ಸ್ಪಂದಿಸುತ್ತಿದ್ದು, ಏಪ್ರಿಲ್‌ ಎರಡನೇ ವಾರದವರೆಗೆ ಚಿಕಿತ್ಸೆ ಮುಂದುವರಿಯಲಿದೆ.

ಭಾರತಕ್ಕೆ ಮರಳಿದ ಬಳಿಕ ಮತ್ತೆ ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿಸುತ್ತಾರೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ಪ್ಯಾಂಕ್ರಿಯಾಟೈಸಿಸ್ (ಮೇದೋಜೀರಕ ಗ್ರಂಥಿ) ತೊಂದರೆಯಿಂದ ಬಳಲುತ್ತಿರುವ ಪಾರಿಕ್ಕರ್ ಆರಂಭದ ಕೆಲವು ದಿನಗಳು ಮುಂಬೈನ ಲೀಲಾವತಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದರು. ಈ ನಡುವೆ ಆಸ್ಪತ್ರೆಯಿಂದ ಬಿಡುಗಡೆ ಪಡೆದು ಫೆಬ್ರುವರಿ 21ರಂದು ರಾಜ್ಯ ಬಜೆಟ್ ಮಂಡಿಸಿದ್ದರು.

ಕೆಲದಿನಗಳ ಕಾಲ ಮನೆಯಲ್ಲೇ ವಿಶ್ರಾಂತಿ ಪಡೆದಿದ್ದ ಅವರು ಗೋವಾ ಮೆಡಿಕಲ್ ಆಸ್ಪತ್ರೆಯಲ್ಲಿಯೂ ಕೆಲಕಾಲ ಚಿಕಿತ್ಸೆ ಪಡೆದಿದ್ದರು.

Comments are closed.