ಮುಂಬೈ

ಮುಂಬಯಿಯಲ್ಲಿ ಬೃಹತ್ ರೈತರ ಪ್ರತಿಭಟನೆ: ಶಿವಸೇನೆ,ಎಂಎನ್‍ಎಸ್,ಎಎಪಿ ಬೆಂಬಲ

Pinterest LinkedIn Tumblr


ಮುಂಬಯಿ: ರೈತರ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಹಾರಾಷ್ಟ್ರದ ನಾಸಿಕ್‌ನ ಸುಮಾರು 35,000ಕ್ಕೂ ಹೆಚು ರೈತರು ಮುಂಬಯಿ ತಲುಪಿದ್ದಾರೆ. ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿರುವ ರೈತರು ಸೋಮವಾರ ವಿಧಾನಭವನಕ್ಕೆ ಮುತ್ತಿಗೆ ಹಾಕಲಿದ್ದಾರೆ.

ಸಿಪಿಐಎಂನ ಅಖಿಲ ಭಾರತೀಯ ಕಿಸಾನ್ ಸಭಾದ ನೇತೃತ್ವದಲ್ಲಿ ರೈತರು ಮಂಗಳವಾರ ನಾಸಿಕ್‌ನಿಂದ ಐದು ದಿನಗಳ ಕಾಲ ಪಾದಯಾತ್ರೆ ಮೂಲಕ ಆಗಮಿಸಿದ್ದಾರೆ. ರೈತರ ಸಂಪೂರ್ಣಸಾಲ ಮನ್ನಾ ಮಾಡಬೇಕು, ಅರಣ್ಯ ಭೂಮಿಯನ್ನು ಕೃಷಿಕರಿಗೆ ಸ್ವಾಮಿನಾಥನ್ ಆಯೋಗದ ವರದಿಯನ್ನು ಜಾರಿಗೊಳಿಸಬೇಕು, ಬೆಳೆ ನಾಶವಾದರೆ ಪ್ರತಿ ಎಕರೆಗೆ 40,000ರು. ಪರಿಹಾರ ನೀಡಬೇಕು ಹಾಗೂ ರಾಜ್ಯದ ನೀರನ್ನು ಗುಜರಾತ್ ರಾಜ್ಯದೊಂದಿಗೆ ಹಂಚಿಕೊಳ್ಳಬಾರದು ಎಂಬ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ ಆರಂಭಿಸಿದ್ದಾರೆ.

ಮದ್ಯ ವಯಸ್ಕ ಹಾಗೂ ಯುವ ರೈತರ ಜತೆಗೆ ಅಪಾರ ಸಂಖ್ಯೆಯಲ್ಲಿ ಮಹಿಳೆಯರೂ ಪ್ರತಿಭಟನೆಯಲ್ಲಿ ಬಾಗವಹಿಸಿದ್ದಾರೆ. ವಿವಿಧ ರೈತ ಸಂಘಟನೆಗಳು ಹಾಗೂ ರಾಜಕೀಯ ಪಕ್ಷಗಳು ರೈತರಿಗೆ ಬೆಂಬಲ ಸೂಚಿಸಿವೆ. ಸೋಮವಾರದ ಪ್ರತಿಭಟನೆಯಲ್ಲಿ ಒಂದು ಲಕ್ಷಕ್ಕೂ ಹೆಚ್ಚು ರೈತರು ಪಾಲ್ಗೊಳ್ಳಲಿದ್ದಾರೆ ರೈತ ಮುಖಂಡರು ತಿಳಿಸಿದ್ದಾರೆ. ಶಿವಸೇನಾ ಮುಖಂಡ ಏಕನಾಥ ಶಿಂಧೆ ಸೇರಿದಂತೆ ರಾಜಕೀಯ ಮುಖಂಡರು ರೈತರನ್ನು ಭೇಟಿಯಾಗಿ ಮಾತಕತೆ ನಡೆಸಿದ್ದಾರೆ. ರೈತರ ಪ್ರತಿಭಟನೆಗೆ ಶಿವಸೇನಾ, ಮಹಾರಾಷ್ಟ್ರ ನವನಿರ್ಮಾಣ ಸೇನಾ ಹಾಗೂ ಎಎಪಿ ಬೆಂಬಲ ವ್ಯಕ್ತಪಡಿಸಿವೆ.

Comments are closed.