ಮುಂಬೈ: ನಗರದ ರೈಲು ನಿಲ್ದಾಣದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ಎಲ್ಲರೂ ನೋಡುತ್ತಿರಬೇಕಾದರೆ ಯುವತಿಯೊಬ್ಬರನ್ನು ಬರಸೆಳೆದು ಚುಂಬಿಸಲು ಪ್ರಯತ್ನಿಸಿದ ಘಟನೆಯನ್ನು ಎಎನ್‍ಐ ವರದಿ ಮಾಡಿದೆ. ಈ ಘಟನೆಗೆ ಸಂಬಂಧಿಸಿದ ದೃಶ್ಯಗಳು ಅಲ್ಲೇ ಇದ್ದ ಸಿಸಿಟಿವಿಯಲ್ಲಿ ಸೆರೆಯಾಗಿವೆ.
ನವಿ ಮುಂಬೈ ರೈಲು ನಿಲ್ದಾಣದಲ್ಲಿ ಯುವತಿಯೊಬ್ಬರು ರೈಲಿಗಾಗಿ ಕಾಯುತ್ತಿರಬೇಕಾದರೆ ಈ ಘಟನೆ ನಡೆದಿದೆ. ಆಕೆ ನಿಂತಿರುವುದನ್ನು ಗಮನಿಸಿದ ವ್ಯಕ್ತಿಯೊಬ್ಬ ಸಮೀಪಕ್ಕೆ ಬಂದು ಆಕೆಯನ್ನು ಬರಸೆಳೆದು ಚುಂಬಿಸಲು ಪ್ರಯತ್ನಿಸುತ್ತಾನೆ. ಅಪರಿಚಿತ ವ್ಯಕ್ತಿಯನ್ನು ದೂರ ತಳ್ಳಿ ಕಿರುಚಿಕೊಂಡ ಕಾರಣ ಅವ ಅಲ್ಲಿಂದ ಕಾಲ್ಕಿತ್ತಿದ್ದಾನೆ.
#WATCH: Girl molested at Turbhe railway station in Navi Mumbai yesterday; accused has been arrested after complaint #Maharashtra pic.twitter.com/kwUfFhCZZG
— ANI (@ANI) February 23, 2018
ಈ ಹಠಾತ್ ಬೆಳವಣಿಗೆಯಿಂದ ಆ ಯುವತಿ ಶಾಕ್‌ಗೆ ಒಳಗಾಗಿದ್ದಾರೆ. ವಿಶೇಷ ಎಂದರೆ ಇಷ್ಟೆಲ್ಲಾ ನಡೆಯುತ್ತಿದ್ದರೂ ಅಕ್ಕಪಕ್ಕದಲ್ಲಿದ್ದ ಪ್ರಯಾಣಿಕರು ಯಾರೂ ಅದನ್ನು ಗಂಭೀರವಾಗಿ ಪರಿಗಣಿಸಿಲ್ಲ. ಶಾಕ್‍ನಿಂದ ಹೊರಬಂದ ಯುವತಿ ಕೂಡಲೆ ರೈಲ್ವೆ ಪೊಲೀಸರಿಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಸಿಸಿ ಟಿವಿ ವೀಡಿಯೋ ಆಧಾರವಾಗಿ ಆರೋಪಿಯನ್ನು ಬಂಧಿಸಲಾಗಿದೆ.