ರಾಷ್ಟ್ರೀಯ

ಮರುಪಾವತಿಯಾಗದ ಸಾಲದ ಮೊತ್ತ ಲಕ್ಷ ಕೋಟಿಗಿಂತಲೂ ಹೆಚ್ಚು

Pinterest LinkedIn Tumblr


ದೆಹಲಿ: ಸೆಪ್ಟೆಂಬರ್‌ 30,2017ರ ವೇಳೆಗೆ ದೇಶದ ಬ್ಯಾಂಕುಗಳಿಗೆ ಹಿಂದಿರುಗಬೇಕಾಗಿರುವ ಸಾಲದ ಮೊತ್ತ 1.12 ಲಕ್ಷ ಕೋಟಿ ರುಗಳಷ್ಟಿದೆ ಎಂದು ತಿಳಿದುಬಂದಿದೆ.

ಸಾಲ ಮರುಪಾವತಿ ಮಾಡುವ ಸಾಮರ್ಥ್ಯವಿದ್ದರೂ ಬೇಕಂತಲೇ ಸಾಲ ತಿರಿಸದ ಉದ್ದೇಶಿತ ಸುಸ್ಥಿದಾರೇ ಇಷ್ಟೆಲ್ಲಾ ಅನುತ್ಪಾದಕ ಅಸ್ತಿಯ ಸೃಷ್ಟಿಕರ್ತರಾಗಿದ್ದಾರೆ. ಇವುಗಳಲ್ಲಿ ಅಗ್ರಸ್ಥಾನದಲ್ಲಿರುವ 11 ಸುಸ್ಥಿದಾರ ಸಮೂಹಗಳು ತಲಾ 1000 ಕೋಟಿ ರುಗಳಿಗಿಂತ ಹೆಚ್ಚಿನ ಪ್ರಮಾಣದ ಸಾಲ ಮಾಡಿದ್ದು ಅವರೆಲ್ಲ ಒಟ್ಟಾಗಿ 26,000 ಕೋಟಿ ರುಗಿಂತಲೂ ಹೆಚ್ಚಿನ ಮೊತ್ತದ ಸಾಲವನ್ನು ಬ್ಯಾಂಕುಗಳಿಗೆ ಮರು ಪಾವತಿಸಬೇಕಿದೆ.

ಉದ್ದೇಶಿತ ಸುಸ್ಥಿದಾರ ವಿರುದ್ಧ ಬ್ಯಾಂಕುಗಳು ಕಾನೂನು ಕ್ರಮಕ್ಕೂ ಮುಂದಾಗಿವೆ. ಇವುಗಳಲ್ಲಿ ಜತಿನ್‌ ಮೆಹ್ತಾ ಪ್ರಾಯೋಜಕತ್ವದ ವಜ್ರಾಭರಣಗಳ ಮಾರಾಟ ಸಮೂಹದ್ದೇ ಸುಮಾರು 5,500 ಕೋಟಿ ರುಗಳಷ್ಟಿದೆ. ಮೆಹ್ತಾ ಸದ್ಯ ತೆರಿಗೆ ಸ್ವರ್ಗ ಎನ್ನಲಾಗುವ ಸೇಂಟ್‌ ಕಿಟ್ಸ್‌ ಮತ್ತು ನೇವಿಸ್‌ ದ್ವೀಪದಲ್ಲಿದ್ದಾರೆ ಎಂದು ತಿಳಿದುಬಂದಿದೆ. ಭಾರತಕ್ಕೆ ಆ ದೇಶದೊಂದಿಗೆ ಅಪರಾಧಿಗಳ ಹಸ್ತಾಂತರದ ಒಪ್ಪಂದವಿಲ್ಲ.

ಮೆಹ್ತಾ ಬಳಿಕ ವಿಜಯ್‌ ಮಲ್ಯನ ಕಿಂಗ್‌ಫಿಷರ್‌ ಏರ್‌ಲೈನ್ಸ್ ಹೆಸರಿನಲ್ಲಿ 3000 ಕೋಟಿ ರುಗಳಷ್ಟು ಸಾಲದ ಬಾಕಿಯಿದೆ. ಇನ್ನು ಕೋಲ್ಕತ್ತ ಮೂಲದ ಸಂದೀಪ್‌ ಝುನ್‌ಝುನ್‌ವಾಲಾ ಒಡೆತನದ ಆರ್‌ಈಐ ಆಗ್ರೋ ಸಂಸ್ಥೆ ಸುಮಾರು 2,730 ಕೋಟಿ ರುಗಳನ್ನು ಮರುಪಾವತಿ ಮಾಡಬೇಕಿದೆ.

ಮರುಪಾವತಿಯಾಗದ ಸಾಲದಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳದ್ದೇ ಪ್ರಮುಖ ಪಾಲಿದ್ದು 65,642 ಕೋಟಿ ರುಗಳಷ್ಟನ್ನು ಮರುಪಾವತಿ ಮಾಡಿಸಿಕೊಳ್ಳಬೇ

ಕಿದೆ. ಇದರಲ್ಲಿ ಭಾರತೀಯ ಸ್ಟೇಟ್‌ ಬ್ಯಾಂಕ್‌ ಹಾಗು ಸಮೂಹದ್ದೇ 27,717 ಕೋಟಿ ರುಗಳಷ್ಟಿದೆ.

ಖಾಸಗಿ ಬ್ಯಾಂಕುಗಳ ಪಾಲು ಸುಮಾರು 14,508 ಕೋಟಿ ರುಗಳಷ್ಟಿದೆ. ಇನ್ನು ವಿದೇಶೀ ಬ್ಯಾಂಕುಗಳು ಹಾಗು ಸಂಸ್ಥೆಗಳ ಬಳಿ 3,872 ಕೋಟಿ ರುಗಳಷ್ಟು ಪಾವತಿಯಾಗದ ಸಾಲವಿದೆ.

ಕಳೆದ ಒಂದು ವರ್ಷದಲ್ಲಿ ಕೆಟ್ಟ ಸಾಲದ ಪ್ರಮಾಣದಲ್ಲಿ ಶೇ27ರಷ್ಟು ಹೆಚ್ಚಳವಾಗಿದ್ದು ಅದಕ್ಕಿಂತ ಹಿಂದಿನ ಮೂರು ವರ್ಷಗಳಲ್ಲಿ ‌ಕ್ರಮವಾಗಿ ಶೇ38,

ಶೇ 67 ಹಾಗು ಶೇ35 ರಷ್ಟು ಏರಿಕೆ ಕಂದುಬಂದಿದೆ. ಸೆಪ್ಟೆಂಬರ್‌ 2013ರಿಂದ ಸೆಪ್ಟೆಂಬರ್‌ 2017ರ ನಡುವಿನ ಅವಧಿಯಲ್ಲಿ ಕೆಟ್ಟ ಸಾಲದ ಪ್ರಮಾಣ 28,417 ಕೋಟಿ ರುಗಳಿಂದ 1,11,739 ಕೋಟಿ ರುಗಳಿಗೆ ಏರಿಕೆ ಕಂಡಿದೆ. ಪ್ರತಿ ವರ್ಷ ಹೆಚ್ಚುತ್ತಿರುವ ಬಡ್ಡಿಯ ಪ್ರಮಾಣವೂ ಇದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.

ಮರುಪಾವತಿ ಮಡುವ ಸಾಮರ್ಥ್ಯವಿದ್ದರೂ ಮರುಪಾವತಿ ಮಾಡದವರನ್ನು ಉದ್ದೇಶಿತ ಸುಸ್ಥಿದಾರರೆಂದು ರಿಸರ್ವ್‌ ಬ್ಯಾಂಕ್‌ ಗುರುತಿಸುತ್ತದೆ. ಅಲ್ಲದೇ ಸಾಲ ಪಡೆದ ಉದ್ದೇಶದ ಹೊರತಾದ ಕೆಲಸದ ಮೇಲೆ ಸಾಲದ ದುಡ್ಡನ್ನು ವಿನಿಮಯ ಮಾಡುವುದು ಅಥವಾ ದುರ್ಬಳಕೆ ಮಾಡುವ ಮೂಲಕ ಮರುಪಾವತಿ ಮಾಡಲು ಆಗದಿರುವುದನ್ನೂ ಉದ್ದೇಶಿತ ಸುಸ್ಥಿದಾರಿಕೆ ಎನ್ನಲಾಗುತ್ತದೆ.

ಇನ್ನು 250 ಕೋಟಿರುಗಳ ಅಂದಾಜಿನ ಸುತ್ತ ಸಾಲ ಮಾಡಿರುವ ಉದ್ದೇಶಿತ ಸುಸ್ಥಿದಾರ ಸಂಸ್ಥೆಗಳ ಸಾಲದ ಮೊತ್ತವೇ 48,000 ಕೋಟಿಯಷ್ಟಿದೆ. ಇದು 2018-19ರ ಬಜೆಟ್‌ನಲ್ಲಿ ಆರೋಗ್ಯ ಕ್ಷೇತ್ರಕ್ಕೆ ವಿನಿಮಯ ಮಾಡಿರುವುದಕ್ಕಿಂತ ಸ್ವಲ್ಪವೇ ಕಡಿಮೆ ಪ್ರಮಾಣದ್ದಾಗಿದೆ.

Comments are closed.