ಮುಂಬೈ

ಫೇಸ್‍ಬುಕ್ ಗೆಳತಿಯನ್ನು ಸೆಕ್ಸ್’ಗಾಗಿ ಒತ್ತಾಯಿಸಿದ ನಿರಾಕರಿಸಿದ್ದಕ್ಕೆ ಏನು ಮಾಡಿದ ಗೊತ್ತಾ..?

Pinterest LinkedIn Tumblr

ಮುಂಬೈ: ಯುವಕನೊಬ್ಬ ಸೆಕ್ಸ್ ನಿರಾಕರಿಸಿದ್ದಕ್ಕೆ ತನ್ನ ಪ್ರಿಯತಮೆಯನ್ನೇ ಶೂ ಲೇಸ್ ನಿಂದ ಕೊಲೆ ಮಾಡಿರುವ ಆಘಾತಕಾರಿ ಘಟನೆ ಮಾಹಾರಾಷ್ಟ್ರದ ಪಾಲ್ಗರ್ ನಲ್ಲಿ ನಡೆದಿದೆ.

ಅಂಕಿತಾ ಮೋರ್(20) ಕೊಲೆಯಾದ ದುರ್ದೈವಿ. ಅಂಕಿತಾ ಮತ್ತು ಆರೋಪಿ ಹರಿದಾಸ್ ನಿರ್ಗುಡೆ ಇವರಿಬ್ಬರು ಫೇಸ್‍ಬುಕ್ ಮೂಲಕ ಸ್ನೇಹಿತರಾಗಿದ್ದರು. ಸ್ನೇಹ ಪ್ರೀತಿಗೆ ತಿರುಗಿ ಇಬ್ಬರು ಪ್ರೀತಿಸುತ್ತಿದ್ದರು. ಆರೋಪಿ ಹರಿದಾಸ್ ನಿರ್ಗುಡೆ ನಲ್ಲಸೊಪಾರದಲ್ಲಿ ವಾಸಿಸುತ್ತಿದ್ದನು. ಭಾನುವಾರ ಅಂಕಿತಾಳನ್ನು ಫೋನ್ ಮಾಡಿ ಮನೆಗೆ ಬರುವಂತೆ ಹೇಳಿದ್ದಾನೆ. ನಂತರ ಅಂಕಿತಾ ಮನೆಗೆ ಹೋಗಿದ್ದಾಳೆ.

ಹರಿದಾಸ್ ಮನೆಗೆ ಬಂದ ಅಂಕಿತಾಳ ಜೊತೆ ಸೆಕ್ಸ್ ಮಾಡುವಂತೆ ಕೇಳಿದ್ದಾನೆ. ಆದರೆ ಅಂಕಿತಾ ಸೆಕ್ಸ್ ಗೆ ನಿರಾಕರಿಸಿದ್ದು, ಪದೇ ಪದೇ ಹರಿದಾಸ್ ಆಕೆಯನ್ನ ಒತ್ತಾಯಿಸಿದ್ದಾನೆ. ಇದಕ್ಕೆ ಒಪ್ಪದಿದ್ದಕ್ಕೆ ಕೋಪಗೊಂಡ ಹರಿದಾಸ್ ತನ್ನ ಶೂ ಲೇಸ್‍ನಿಂದ ಆಕೆಯ ಕತ್ತು ಬಿಗಿದು ಹತ್ಯೆ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿ ಅಂಕಿತಾ ಮೃತ ದೇಹವನ್ನು ಹತ್ತಿರದ ಪ್ರದೇಶಕ್ಕೆ ತೆಗೆದುಕೊಂಡು ಎಸೆದಿದ್ದಾನೆ. ನಂತರ ಸ್ಥಳೀಯರು ಮೃತ ದೇಹವನ್ನು ನೋಡಿ ಪೊಲೀಸರಿಗೆ ಕರೆ ಮಾಡಿ ಮಾಹಿತಿ ತಿಳಿಸಿದ್ದಾರೆ. ಮಾಹಿತಿ ತಿಳಿದ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಹೋಗಿ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆಂದು ಆಸ್ಪತ್ರೆಗೆ ರವಾನಿಸಿದ್ದಾರೆ.

ಈ ಘಟನೆ ಸಂಬಂಧ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಅಡಿಯಲ್ಲಿ ಪ್ರಕರಣವನ್ನು ದಾಖಲಿಸಿಕೊಂಡಿದ್ದು, ತನಿಖೆಯನ್ನು ನಡೆಸಿ ಇಂದು ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ವಿಚಾರಣೆ ವೇಳೆ ಆರೋಪಿ ತಾನೇ ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ ಎಂದು ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ

Comments are closed.