ಮುಂಬೈ

ನೀರವ್ ಮೋದಿ ಹಗರಣ: ಅಸ್ತಿತ್ವದಲ್ಲೇ ಇರದ 3 ವಜ್ರದ ಕಂಪನಿಗಳಿಗೆ ಪಿಎನ್‌ಬಿ ಸಾಲ

Pinterest LinkedIn Tumblr


ಮುಂಬಯಿ: ಪಂಜಾಬ್‌ ನ್ಯಾಷನಲ್‌ ಬ್ಯಾಂಕ್‌ ಸಾಲ ನೀಡಿರುವ ನೀರವ್‌ ಮೋದಿಯ ಮೂರು ವಜ್ರದ ಕಂಪನಿಗಳು ಕೊಟ್ಟಿರುವ ವಿಳಾಸದಲ್ಲಿ ಅಸ್ತಿತ್ವದಲ್ಲೇ ಇರಲಿಲ್ಲ. ಸಾಲ ಪಡೆಯುವಾಗ ಪಿಎನ್‌ಬಿಗೆ ಈ ಮಾಹಿತಿಯನ್ನು ನೀರವ್ ಮೋದಿ ನೀಡಿರಲಿಲ್ಲ.

ವಂಚಕ ಉದ್ಯಮಿ ನೀರವ್ ಮೋದಿ ಬ್ಯಾಂಕಿಗೆ ನೀಡಿರುವ ವಿಳಾಸಲ್ಲಿ ಸಿಬಿಐ ಶೋಧ ನಡೆಸಿದರೂ ಅಲ್ಲೇನೂ ಸಾಕ್ಷ್ಯ ದೊರೆತಿಲ್ಲ.

ಸೋಲಾರ್ ಎಕ್ಸ್‌ಪೋರ್ಟ್ಸ್ ಮತ್ತು ಸ್ಟೆಲ್ಲರ್ ಡೈಮಂಡ್ಸ್‌ ಎಂಬ ಎರಡು ಕಂಪನಿಗಳ ರಿಜಿಸ್ಟರ್ಡ್‌ ಕಚೇರಿಗಳು ಒಪೆರಾ ಹೌಸ್‌ನ ನಾಗಿನ್‌ದಾಸ್‌ ಮ್ಯಾನ್ಷನ್‌ನಲ್ಲಿವೆ. ವಿಕ ಸೋದರ ಸಂಸ್ಥೆ ಟೈಮ್ಸ್‌ ಆಫ್‌ ಇಂಡಿಯಾ ಅಲ್ಲಿಗೆ ಭೇಟಿ ನೀಡಿದಾಗ, ಈ ಕಂಪನಿಗಳನ್ನು ಲೋವರ್‌ ಪರೇಲ್‌ನ ಕಮಲಾ ಮಿಲ್ಸ್‌ಗೆ ಬಹಳ ಹಿಂದೆಯೇ ಸ್ಥಳಾಂತರಿಸಲಾಗಿದೆ ಎಂದು ನೀರವ್‌ ಮೋದಿಯ ಸಿಬ್ಬಂದಿಯೊಬ್ಬರು ತಿಳಿಸಿದರು.

ನೀರವ್ ವಂಚನೆ ಪ್ರಕರಣ: ಗೋಕುಲ್ ನಾಥ್ ಶೆಟ್ಟಿ ಸೇರಿದಂತೆ ಮೂವರ ಬಂಧನ

ಮೂರನೆಯ ಕಂಪನಿ ಡೈಮಂಡ್‌ ಆರ್‌ ಯುಎಸ್‌ನ ನೋಂದಾಯಿತ ಕಚೇರಿ ಒಪೆರಾ ಹೌಸ್‌ನ ಪ್ರಸಾದ್‌ ಚೇಂಬರ್ಸ್‌ನಲ್ಲಿದೆ. ಅಲ್ಲಿ ನೀರವ್‌ ಮಾಲೀಕತ್ವದ ಸೇವಾ ಸಂಸ್ಥೆಯ ಬೋರ್ಡ್‌ ಮಾತ್ರ ಅಲ್ಲಿದೆ. ಆದರೆ ಯಾವ ಬಗೆಯ ಸೇವಾ ಚಟುವಟಿಕೆಗಳನ್ನು ಕಂಪನಿ ನಡೆಸಿದೆ ಎಂಬ ಬಗ್ಗೆ ವಿವರ ನೀಡಲು ಸಿಬ್ಬಂದಿ ನಿರಾಕರಿಸಿದರು.

Comments are closed.