ಮುಂಬೈ

ವಿಶ್ವದ ಟಾಪ್‌-15 ಶ್ರೀಮಂತ ನಗರಗಳ ಪಟ್ಟಿಯಲ್ಲಿ ಮುಂಬಯಿ !

Pinterest LinkedIn Tumblr


ಮುಂಬಯಿ: ದೇಶದ ವಾಣಿಜ್ಯ ರಾಜಧಾನಿ ಮುಂಬಯಿ ವಿಶ್ವದ ಅಗ್ರ 15 ಶ್ರೀಮಂತ ನಗರಗಳಲ್ಲಿ ಒಂದು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹೌದು, ನ್ಯೂ ವರ್ಲ್ಡ್ ವೆಲ್ತ್‌ ವರದಿಯ ಪ್ರಕಾರ, ಮುಂಬಯಿ ಒಟ್ಟು 950 ಬಿಲಿಯನ್‌ ಡಾಲರ್‌ (ಸುಮಾರು 61 ಲಕ್ಷ ಕೋಟಿ ರೂಪಾಯಿ)ಸಂಪತ್ತಿನೊಂದಿಗೆ ವಿಶ್ವದ ಅತ್ಯಂತ ಶ್ರೀಮಂತ ನಗರಗಳ ಪಟ್ಟಿಯಲ್ಲಿ 12 ನೇ ಸ್ಥಾನವನ್ನು ಪಡೆದಿದೆ. ಇದರೊಂದಿಗೆ ಮುಂಬಯಿ ನಗರವು ಟೊರೊಂಟೊ ಮತ್ತು ಪ್ಯಾರಿಸ್‌ನಂತಹ ನಗರಗಳನ್ನು ಹಿಂದಿಕ್ಕಿದೆ. ವಿಶೇಷವೆಂದರೆ, ನ್ಯೂ ವರ್ಲ್ಡ್ ವೆಲ್‌§ ಇತ್ತೀಚಿನ ವರದಿಯೊಂದರಲ್ಲಿ ಭಾರತ ಕೂಡ ವಿಶ್ವದ ಶ್ರೀಮಂತ ದೇಶಗಳ ಪಟ್ಟಿಯಲ್ಲಿ 6ನೇ ಸ್ಥಾನವನ್ನು ಪಡೆದುಕೊಂಡಿತ್ತು.

ವಿಶ್ವದ ಶ್ರೀಮಂತ ನಗರಗಳ ಈ ಪಟ್ಟಿಯಲ್ಲಿ ಅಮೆರಿಕದ ನ್ಯೂಯಾರ್ಕ್‌ ನಗರವು 3 ಟ್ರಿಲಿಯನ್‌ ಡಾಲರ್‌ (ಸುಮಾರು 193 ಲಕ್ಷ ಕೋ.ರೂ.)ಸಂಪತ್ತಿನೊಂದಿಗೆ ಮೊದಲ ಸ್ಥಾನವನ್ನು ಪಡೆದಿದೆ. ಇದರ ಬಳಿಕ 173 ಲಕ್ಷ ಕೋ.ರೂ. ಆಸ್ತಿಯೊಂದಿಗೆ ಲಂಡನ್‌ ಎರಡನೇ ಹಾಗೂ 161 ಲಕ್ಷ ಕೋ.ರೂ. ಆಸ್ತಿಯೊಂದಿಗೆ ಟೋಕಿಯೋ ಮೂರನೇ ಸ್ಥಾನದಲ್ಲಿದೆ. ಸ್ಯಾನ್‌ ಫ್ರಾನ್ಸಿಸ್ಕೋ (147 ಲಕ್ಷ ಕೋ.ರೂ.) ಮತ್ತು ಬೀಜಿಂಗ್‌ (141 ಲಕ್ಷ ಕೋ.ರೂ.)ನಗರಗಳು ಪಟ್ಟಿಯಲ್ಲಿ ಕ್ರಮವಾಗಿ 4ನೇ ಮತ್ತು 5ನೇ ಸ್ಥಾನದಲ್ಲಿವೆ.

ಮುಂಬಯಿಯ ಒಟ್ಟು ಸಂಪತ್ತು 950 ಬಿಲಿಯನ್‌ ಡಾಲರ್‌(ಸುಮಾರು 61 ಲಕ್ಷ ಕೋ.ರೂ.) ಆಗಿದೆ. ಮುಂಬಯಿ ಭಾರತದ ಆರ್ಥಿಕ ಕೇಂದ್ರವಾಗಿದೆ. ಇದಲ್ಲದೆ ವಿಶ್ವದ 12ನೇ ಅತಿದೊಡ್ಡ ಸ್ಟಾಕ್‌ ಎಕ್ಸ್‌ಚೇಂಜ್‌ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಬಾಂಬೇ ಸ್ಟಾಕ್‌ ಎಕ್ಸ್‌ಚೆಂಜ್‌ ಕೂಡ ನಗರದಲ್ಲಿದೆ. ನಗರದಲ್ಲಿ ವಾಣಿಜ್ಯ ಸೇವೆಗಳು, ರಿಯಲ್‌ ಎಸ್ಟೇಟ್‌ ಮತ್ತು ಮೀಡಿಯಾ ಇಂಡಸ್ಟ್ರಿಗಳಿವೆ ಎಂದು ಮುಂಬಯಿ ಮಹಾನಗರದ ಬಗ್ಗೆ ನ್ಯೂ ವರ್ಲ್ಡ್ ವೆಲ್ತ್‌ ವರದಿಯಲ್ಲಿ ವಿವರಿಸಲಾಗಿದೆ.

ಏನಿದು ಒಟ್ಟು ಸಂಪತ್ತು ?

ಯಾವುದೇ ದೇಶ ಅಥವಾ ನಗರದಲ್ಲಿ ವಾಸಿಸುವ ಜನರ ಒಟ್ಟು ಖಾಸಗಿ ಸಂಪತ್ತು ಆ ದೇಶ ಅಥವಾ ನಗರದ ಒಟ್ಟು ಸಂಪತ್ತು ಆಗಿರುತ್ತದೆ. ಇದರಲ್ಲಿ ಜನರ ಆಸ್ತಿ, ನಗದು, ಷೇರು, ಬಿಜ್‌ನೆಸ್‌ ಇಂಟ್ರೆಸ್ಟ್‌ ಅನ್ನು ಸೇರಿಸಿಕೊಳ್ಳಲಾಗುತ್ತದೆ. ಆದರೆ, ಈ ವರದಿಯಲ್ಲಿ ಸರಕಾರಿ ನಿಧಿಗಳನ್ನು ಸೇರಿಸಿಕೊಳ್ಳಲಾಗಿಲ್ಲ ಎಂದು ನ್ಯೂ ವರ್ಲ್ಡ್ ವೆಲ್‌§ ತನ್ನ ವರದಿಯಲ್ಲಿ ಸ್ಪಷ್ಟಪಡಿಸಿದೆ.

ಮುಂಬಯಿಯಲ್ಲಿ 28 ಶತಕೋಟ್ಯಾಧಿಪತಿಗಳು
ಶತಕೋಟ್ಯಾಧಿಪತಿಗಳ ವಿಷಯದಲ್ಲೂ ಮುಂಬಯಿ ವಿಶ್ವದ ಅಗ್ರ 10 ನಗರಗಳಲ್ಲಿ ಒಂದಾಗಿದೆ. ಮುಂಬಯಿಯಲ್ಲಿ ಒಟ್ಟು 28 ಶತಕೋಟ್ಯಾಧಿಪತಿಗಳು ಇದ್ದಾರೆ. ಅಲ್ಲದೆ, ಮುಂಬಯಿ ರಾಷ್ಟ್ರದ ಅತ್ಯಂತ ಶ್ರೀಮಂತ ನಗರ ಎಂಬ ಹೆಗ್ಗಳಿಕೆಗೂ ಪಾತ್ರವಾಗಿದೆ.

-ಉದಯವಾಣಿ

Comments are closed.