ಮುಂಬೈ

ಷೇರು ಮಾರುಕಟ್ಟೆಯಲ್ಲಿ ಭಾರಿ ಕುಸಿತ: 3 ದಿನದಲ್ಲಿ 9.6 ಲಕ್ಷ ಕೋಟಿ ರೂ. ನಷ್ಟ

Pinterest LinkedIn Tumblr


ಮುಂಬೈ: ಮುಂಬೈ ಷೇರು ವಿನಿಮಯ ಮಾರುಕಟ್ಟೆಯಲ್ಲಿ ಕಳೆದ ಮೂರು ದಿನಗಳಿಂದ ಅಲ್ಲೋಲಕಲ್ಲೋಲವಾಗಿದೆ. ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮೇಲೇರುತ್ತಿದ್ದ ಸೆನ್ಸೆಕ್ಸ್‌ ಈಗ ಕೆಳಮುಖವಾಗಿದೆ.

ಸೆನ್ಸೆಕ್ಸ್‌ನ ಈ ಏರಿಳಿತದಿಂದಾಗಿ ಹೂಡಿಕೆದಾರರು ಮೂರೇ ಮೂರು ದಿನದಲ್ಲಿ 9.6 ಲಕ್ಷ ಕೋಟಿ ರೂಪಾಯಿ ನಷ್ಟ ಅನುಭವಿಸಿದ್ದಾರೆ.

ಮುಂಬೈ ಷೇರು ವಿನಿಮಯ ಮಾರುಕಟ್ಟೆ ಸೆನ್ಸೆಕ್ಸ್‌ ಮಂಗಳವಾರದ ವಹಿವಾಟಿನಲ್ಲಿ 1300 ಅಂಕಗಳ ಕುಸಿತ ಕಂಡಿದೆ. ಫೆಬ್ರವರಿ 1ರಂದು ಬಜೆಟ್‌ ಮಂಡನೆಯಾದ ನಂತರದ ದಿನದಿಂದಲೂ ಸೆನ್ಸೆಕ್ಸ್‌ನಲ್ಲಿ ಭಾರಿ ಕುಸಿತ ಉಂಟಾಗಿದೆ.

ಇದರ ಒಟ್ಟಾರೆ ಪರಿಣಾಮ ಹೂಡಿಕೆದಾರರ ಮೇಲೆ ಬಿದ್ದಿದೆ. ಇದರಿಂದ ಹೂಡಿಕೆದಾರರು ಕೋಟ್ಯಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ. ಇದರ ಒಟ್ಟಾರೆ ಮೌಲ್ಯ 9.6 ಲಕ್ಷ ಕೋಟಿ ರೂಪಾಯಿ ಎಂದು ಆರ್ಥಿಕ ತಜ್ಞರು ವಿಶ್ಲೇಷಿಸಿದ್ದಾರೆ.

200ಕ್ಕೂ ಹೆಚ್ಚು ಷೇರುಗಳಲ್ಲಿ ಭಾರಿ ವ್ಯತ್ಯಾಸ ಕಂಡುಬಂದಿದೆ. ರಾಷ್ಟ್ರೀಯ ಷೇರು ಮಾರುಕಟ್ಟೆಯಲ್ಲೂ ಭಾರಿ ಕುಸಿತ ಕಂಡುಬಂದಿದೆ.

Comments are closed.