ರಾಷ್ಟ್ರೀಯ

ಮೊದಲೇ ಮದುವೆಯಾಗಿದ್ದ ಜೋಡಿ ಮತ್ತೊಮ್ಮೆ ಮಾಸ್‌ ಮದುವೆಯಲ್ಲಿ ತಾಳಿ ಕಟ್ಟಿಕೊಂಡರು!

Pinterest LinkedIn Tumblr

* ರೋಹಿತ್‌ ಮಿಶ್ರಾ


ಲಖನೌ: ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ ಸರಕಾರ ಏರ್ಪಡಿಸಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೊದಲೇ ಮದುವೆಯಾಗಿದ್ದ ಜೋಡಿಗಳು ಮತ್ತೆ ಹಸೆಮಣೆ ಏರಿದ ಘಟನೆ ನಡೆದಿದೆ.

ರಾಜ್ಯ ಸರಕಾರದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಜೋಡಿಗಳ ಪೈಕಿ ಹಲವು ಜೋಡಿಗಳಿಗೆ ಈಗಾಗಲೇ ಮದುವೆಯಾಗಿತ್ತು ಎಂಬ ಅಚ್ಚರಿಯ ಅಂಶ ಬೆಳಕಿಗೆ ಬಂದಿದೆ.

29ನೇ ಫರಿಜಾಬಾದ್‌ನ ಫೌಂಡೇಷನ್‌ ದಿನದ ಪ್ರಯುಕ್ತ ರಾಜ್ಯ ಸರಕಾರ ಹಮ್ಮಿಕೊಂಡಿದ್ದ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಮೊದಲೇ ಮದುವೆಯಾಗಿದ್ದ ಜೋಡಿಗಳು ಪುನಃ ಮದುವೆ ಮಾಡಿಕೊಂಡ ವಿಚಾರವಾಗಿ ಗದ್ದಲ ನಿರ್ಮಾಣವಾಗಿತ್ತು.

ಸಮೂಹಿಕ ವಿವಾಹದಲ್ಲಿ ಪಾಲ್ಗೊಂಡ 50 ಜೋಡಿಗಳ ಪೈಕಿ 20 ಜೋಡಿಗಳಿಗೆ ಮೊದಲೇ ವಿವಾಹವಾಗಿತ್ತು ಎಂದು ಕಾಂಗ್ರೆಸ್‌ ಆರೋಪಿಸಿದೆ.

ಕಾಂಗ್ರೆಸ್‌ ಆರೋಪವನ್ನು ಅಲ್ಲಗಳೆದ ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಪ್ರಾಗ್ಯಾ ಶಂಕರ್‌ ತಿವಾರಿ, ಸಮಗ್ರ ವಿವಾಹ ಯೋಜನೆಯಡಿ ಕಳೆದ ವರ್ಷ ಅಕ್ಟೋಬರ್‌ ತಿಂಗಳಲ್ಲಿ ಈ ಯೋಜನೆ ಜಾರಿಗೆ ತರಲಾಯಿತು. ಅಂದಿನಿಂದ ವಿವಾಹಿತ ಜೋಡಿಯ ದಾಖಲಾತಿ ಮಾಡಿಕೊಳ್ಳಲಾಗುತ್ತಿದೆ. ಅಂದು ದಾಖಲಾತಿ ಮಾಡಿಕೊಂಡ ಜೋಡಿಗಳು ನವೆಂಬರ್‌ 2017ರಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಮದುವೆಯಾಗಿದ್ದಾರೆ. ಅಂದು ದಾಖಲಾತಿ ಮಾಡಿಕೊಂಡ ಜೋಡಿಗಳನ್ನು ಆಹ್ವಾನಿಸಲಾಗಿತ್ತು ಎಂದು ಸ್ಪಷ್ಟನೆ ನೀಡಿದ್ದಾರೆ.

ಕಾಂಗ್ರೆಸ್‌ ನಾಯಕ ಸುರೇಂದ್ರ ರಾಜ್‌ಪುತ್‌ ಇದೊಂದು ಭ್ರಷ್ಟಾಚಾರ ಎಂದು ಆರೋಪಿಸಿದ್ದಾರೆ.

Comments are closed.