ಮುಂಬೈ

ದುಬೈನಿಂದ ಅಕ್ರಮವಾಗಿ ಚಿನ್ನ ತರುವುದು ಹೇಗೆ?

Pinterest LinkedIn Tumblr


ಮುಂಬಯಿ: ರಾಜಕೋಟೆಯ ಖ್ಯಾತ ಇಬ್ಬರು ಉದ್ಯಮಿಗಳು ದುಬೈನಿಂದ 50 ಕೆ.ಜಿ. ಅಕ್ರಮವಾಗಿ ಚಿನ್ನ ಸಾಗಾಟ ಮಾಡಲು ಹೊಗಿ ಜೈಲುಪಾಲಾದ ಘಟನೆ ನಡೆದಿದೆ.

ದುಬೈನಲ್ಲಿ ವಜ್ರದ ಅಂಗಡಿ ಹಾಗೂ ದುಬೈನ ಮೆಟ್ರೋ ಗೋಲ್ಡ್‌ನ ಪಾಲುದಾರರನೂ ಆಗಿರುವ ಮಿಲನ್‌ ಪಟೇಲ್‌ ಹಾಗೂ ಈತನ ತಮ್ಮ ಗೌತಮ್‌, ಇಂಡಕ್ಷನ್‌ ಕುಲುಮೆ ತಯಾರಿಸುವ ಕಾರ್ಖಾನೆಯನ್ನು ಹೊಂದಿದ್ದು, ಇಬ್ಬರು ಸೇರಿ ಕಳೆದ ಆರು ತಿಂಗಳಿನಿಂದ 105 ಕೋಟಿ ಮೌಲ್ಯದ ಸುಮಾರು 350 ಕೆ.ಜಿ.ಗೂ ಅಧಿಕ ಚಿನ್ನವನ್ನು ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಿದ್ದಾರೆ ಎಂದು ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿ ತಿಳಿಸಿದ್ದಾರೆ.

ಮಿಲನ್‌ ಪಟೇಲ್‌ ಮೊದಲಿಗೆ ದುಬೈನಿಂದ ಚಿನ್ನದ ವ್ಯಾಪಾರ ನಡೆಸುತ್ತಿದ್ದ, ಈತನ ತಮ್ಮನ ಸಹಾಯದಿಂದ ಅಧಿಕ ಹಣ ಗಳಿಸುವ ಉದ್ದೇಶದಿಂದ ಈ ದಂದೆಗಿಳಿದ ಮಿಲನ್‌, ತಮ್ಮನ ಕಾರ್ಖಾನೆಗೆ ಉಪಕರಣಗಳನ್ನು ರಫ್ತು ಮತ್ತು ಆಮದು ಮಾಡುತ್ತಾ ಬುತ್ತಾರೆ. ಹೀಗೆ ಮಾಡುವ ಸಂದರ್ಭದಲ್ಲಿ ಮೊದಲು ಈ ಉಪಕರಣಗಳ ಒಳಗೆ ತಾಮ್ರವನ್ನು ಅಡಗಿಸಿ ಭದ್ರತಾ ಲೋಪವನ್ನು ಪತ್ತೆಹಚ್ಚಿದ್ದಾರೆ. ವಾಹನಗಳ ಪರಿಶೀಲನೆ ಸಂದರ್ಭದಲ್ಲಿ ಇದು ಕೇವಲ ಕಪ್ಪು ಬಣ್ಣವನ್ನಷ್ಟೇ ತೋರಿಸುತ್ತದೆ. ಹೀಗಾಗಿ ಭದ್ರತಾ ಸಿಬ್ಬಂದಿಗಳು ಇವುಗಳನ್ನು ಕಬ್ಬಿಣದ ಸಲಕರಣೆಗಳು ಎಂದು ಭಾವಿಸಿ ಪರಿಶೀಲನೆ ನಡೆಸದೇ ಬಿಡುತ್ತಿದ್ದರು.

ಈ ಪರೀಕ್ಷೆಯಲ್ಲಿ ಪಾಸ್‌ ಆದ ಬಳಿಕ ಇಬ್ಬರೂ ಆಫ್ರಿಕನ್‌ ದೇಶಗಳಿಂದ ಚಿನ್ನವನ್ನು ದುಬೈಗೆ ಆಮದು ಮಾಡಿ, ಬಳಿಕ ಅಲ್ಲಿ ಪಾಕ್ ಮೂಲದ ಹನೀಫ್‌ ಎಂಬಾತನ್ನು ಪರಿಚಯ ಮಾಡಿಕೊಂಡು, ಆತನ ಸಹಾಯದಿಂದ ಚಿನ್ನವನ್ನು ಕರಗಿಸಿ ಕಬ್ಬಿಣದ ಸಲಾಕೆಯೊಳಗೆ ತುಂಬಿಕೊಂಡು ಬಂದಿದ್ದಾರೆ. ಹನೀಫ್‌ಗೆ 21,000 ರೂ.ಗಳನ್ನು ಸಂಭಾವನೆಯಾಗಿ ನೀಡಿ ಈ ಕೆಲಸವನ್ನು ಆತನಿಂದಲೇ ಮಾಡಿಸಿದ್ದಾರೆ.

ಒಟ್ಟಾರೆ ಇಬ್ಬರೂ ಸೇರಿ ಡಿ.16ರಂದು 35ಕೆ.ಜಿ ಚಿನ್ನ ಹಾಗೂ ಡಿ.20ರಂದು 40 ಕೆ.ಜಿ ಚಿನ್ನವನ್ನು ಅಕ್ರಮವಾಗಿ ಸಾಗಿಸಿದ್ದಾರೆ. ಬಳಿಕ ಈ ಚಿನ್ನವನ್ನು ಅಕ್ರಮವಾಗಿ ಕಡಿಮೆ ಬೆಲೆಗೆ ಸ್ಥಳೀಯ ಚಿನ್ನದ ವ್ಯಾಪಾರಿಗಳಿಗೆ ಮಾರಾಟ ಮಾಡಿದ್ದಾರೆ. ಪ್ರಸಕ್ತ ಕಂದಾಯ ಇಲಾಖೆ ಅಧಿಕಾರಿಗಳು ಈ ಎಲ್ಲಾ ಮಾಹಿತಿಯನ್ನು ಕಲೆಹಾಕಿದ್ದು ಇವರನ್ನು ವಿಚಾರಣೆ ನಡೆಸಿದ್ದಾರೆ.

Comments are closed.