ಕರ್ನಾಟಕ

ಸಲಿಂಗ ಕಾಮಕ್ಕೆ ಸಹಕಾರ ನೀಡದಕ್ಕೆ ಕೋಪಗೊಂಡು ಗುರುತು ಸಿಗದಂತೆ ಕೊಲೆಗೈದ

Pinterest LinkedIn Tumblr


ಬೆಂಗಳೂರು: ಮಡಿವಾಳದಲ್ಲಿ ನಡೆದ ಕೊಲೆ ಪ್ರಕರಣದಲ್ಲಿ ಸಲಿಂಗ ಕಾಮಕ್ಕೆ ಸಹಕಾರ ನೀಡದ್ದಕ್ಕೆ ಸಹದ್ಯೋಗಿಯನ್ನು ಹತ್ಯೆ ಮಾಡಿರುವ ಕಾರಣವನ್ನು ಪೊಲೀಸರು ಬಯಲಿಗೆಳೆದಿದ್ದಾರೆ.

ಡಿಸೆಂಬರ್ 21ರಂದು ಬೆನ್ನೆಗೌಡ ಕೊಲೆಯಾಗಿದ್ದ. ರೆಸ್ಟೋರೆಂಟನಲ್ಲಿ ಕೆಲಸ ಮಾಡುತ್ತಿದ್ದ ಬೆನ್ನೆಗೌಡನನ್ನು ಸಹದ್ಯೋಗಿ ದೇವರಾಜ್ ಕೊಲೆಗೈದಿದ್ದಾನೆ.

ಕಳೆದ ಕೆಲ ತಿಂಗಳುಗಳಿಂದ ಸಲಿಂಗ ಕಾಮಿಗಳಾಗಿದ್ದ ಇವರಿಬ್ಬರು ಪರಸ್ಪರ ಒಪ್ಪಿಗೆ ಮೆರೆಗೆ ಸೆಕ್ಸ್ ಮಾಡುತ್ತಿದ್ದರು. ಅದೆರೀತಿ 21ರಂದು ಸಲಿಂಗ ಕಾಮ ನಡೆಸಲು ಸ್ಮಶಾನಕ್ಕೆ ಹೋಗಿದ್ದರು. ಈ ಸಂದರ್ಭದಲ್ಲಿ ಬೆನ್ನೆಗೌಡ ಸೆಕ್ಸ್ ನಡೆಸಲು ನಿರಾಕರಿಸಿದ್ದಾನೆ. ಇದರಿಂದ ಕೋಪಗೊಂಡ ದೇವರಾಜ್ ಬಿಯರ್ ಬಾಟಲಿಯಿಂದ ಹೊಡೆದು ಕಲ್ಲು ಎತ್ತಿಹಾಕಿ ಗುರುತು ಸಿಗದಂತೆ ಹತ್ಯೆ ಮಾಡಿದ್ದ. ಪ್ರಕರಣ ಬಯಲಿಗೆಳೆದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

Comments are closed.