ಮುಂಬೈ

ಯುವತಿ ಮೇಲೆ ಅತ್ಯಾಚಾರ, ದರೋಡೆ: ಓಲಾ ಚಾಲಕ, ಸಹಪ್ರಯಾಣಿಕನ ಬಂಧನ

Pinterest LinkedIn Tumblr


ಮುಂಬಯಿ: 24 ವರ್ಷದ ಯುವತಿಯ ಮೇಲೆ ಅತ್ಯಾಚಾರ ಹಾಗೂ ದರೋಡೆ ಮಾಡಿರುವ ಆರೋಪದ ಮೇಲೆ ಓಲಾ ಚಾಲಕ ಹಾಗೂ ಸಹ ಪ್ರಯಾಣಿಕನನ್ನು ಪೊಲೀಸರು ಬಂಧಿಸಿದ್ದಾರೆ.

ಮೀರಾ ರಸ್ತೆ ಬಳಿಯ ಕಾಶಿಮಿರಾದಿಂದ ಥಾಣೆಯಲ್ಲಿರುವ ಮನೆಗೆ ತೆರಳಲು ಯುವತಿಯೊಬ್ಬರು ಮಂಗಳವಾರ ಸಂಜೆ ಓಲಾ ಶೇರಿಂಗ್‌ ಟ್ಯಾಕ್ಸಿ ಬುಕ್ ಮಾಡಿದ್ದು, ಕ್ಯಾಬ್‌ನಲ್ಲಿ ಸಹಪ್ರಯಾಣಿಕನೊಬ್ಬ ಸಂಚರಿಸುತ್ತಿದ್ದ ಎಂದು ಸಂತ್ರಸ್ತ ಯುವತಿ ತಿಳಿಸಿದ್ದಾರೆ.

32 ವರ್ಷದ ಓಲಾ ಡೈವರ್ ಹಾಗೂ 31ರ ಸಹಪ್ರಯಾಣಿಕ ಸೇರಿ ತನ್ನ ಬಳಿಯಿರುವ ಬೆಲೆಬಾಳುವ ವಸ್ತುಗಳನ್ನು ದೋಚಿ, ಅತ್ಯಾಚಾರ ಎಸಗಿದ್ದಾರೆ ಎಂದು ಸಂತ್ರಸ್ತೆ ಪೊಲೀಸ್ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

ಅತ್ಯಾಚಾರದ ಬಳಿಕ ಆರೋಪಿಗಳು ಮಹಿಳೆಯನ್ನು ವಜ್ರೇಶ್ವರಿ ಬಳಿಯ ಲಾಡ್ಜ್‌ಗೆ ಬಿಟ್ಟು ಪರಾರಿಯಾಗಿದ್ದಾರೆ. ಈ ವೇಳೆ ಸಂತ್ರಸ್ತ ಮಹಿಳೆ ವಾಹನದ ನೋಂದಣಿ ಸಂಖ್ಯೆಯನ್ನು ನೆನಪಿಟ್ಟುಕೊಂಡು ಪೊಲೀಸರಿಗೆ ದೂರು ನೀಡಿದ್ದಾರೆ. ಸದ್ಯ ಪೊಲೀಸರು ಕ್ಯಾಬ್ ವಾಹನವನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ.

Comments are closed.