ಕರಾವಳಿ

ಸಿದ್ದಾಪುರ ಜಿ.ಪಂ ಸದಸ್ಯ ಹಾಲಾಡಿ ತಾರನಾಥ ಶೆಟ್ಟಿ (ತಾರಣ್ಣ) ಇನ್ನಿಲ್ಲ

Pinterest LinkedIn Tumblr

ಕುಂದಾಪುರ: ರಾಜಕೀಯ, ಧಾರ್ಮಿಕ,ಶೈಕ್ಷಣಿಕ, ಯಕ್ಷಗಾನ ಮೊದಲಾದ ಕ್ಷೇತ್ರದಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿ ಜನಾನುರಾಗಿಯಾಗಿದ್ದ ಸಿದ್ದಾಪುರ ಕ್ಷೇತ್ರದ ಜಿಲ್ಲಾ ಪಂಚಾಯತಿ ಸದಸ್ಯ ಹಾಲಾಡಿ ತಾರನಾಥ ಶೆಟ್ಟಿ (56) (ತಾರಣ್ಣ) ಅನಾರೋಗ್ಯದಿಂದ ಭಾನುವಾರ ರಾತ್ರಿ ನಿಧನರಾಗಿದ್ದಾರೆ.

ಹಾಲಾಡಿ ಶ್ರೀ ಮರ್ಲು ಚಿಕ್ಕು ದೈವಸ್ಥಾನದ ಧರ್ಮದರ್ಶಿಯಾಗಿದ್ದ ಇವರು ಶ್ರೀ ಕ್ಷೇತ್ರ ಹಾಲಾಡಿ ಯಕ್ಷಗಾನ ಮೇಳದ ಸಂಚಾಲಕರಾಗಿದ್ದರು. ಸುದೀರ್ಘ ಮೂರ್ನಾಲ್ಕು ದಶಕಗಳ ಕಾಲ ರಾಜಕೀಯ ಕ್ಷೇತ್ರದಲ್ಲಿ ಸಕ್ರೀಯರಾಗಿದ್ದ ತಾರಣ್ಣ ಕಳೆದ ಜಿ.ಪಂ ಚುನಾವಣೆಯಲ್ಲಿ ಬಿಜೆಪಿ ಪಕ್ಷದಿಂದ ಸ್ಪರ್ಧಿಸಿ ಸಿದ್ದಾಪುರ ಕ್ಷೇತ್ರದಿಂದ ಆರಿಸಿ ಬಂದಿದ್ದರು.

ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ತಾರನಾಥ್ ಶೆಟ್ಟಿಯವರು ಅನಾರೋಗ್ಯದ ನಡುವೆಯೂ ಸಾಮಾಜಿಕ ಕಾರ್ಯಗಳಲ್ಲಿ ಮುಂಚೂಣಿಯಲ್ಲಿ ತೊಡಗಿಸಿಕೊಂಡಿದ್ದರು. ಲಿವರ್ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಅವರು ಭಾನುವಾರ ರಾತ್ರಿ ಸ್ವಗ್ರಹದಲ್ಲಿ ನಿಧನರಾಗಿದ್ದಾರೆ. ಅವಿವಾಹಿತರಾಗಿದ್ದ ತಾರಣ್ಣ ಕುಟುಂಬಿಕರು, ಬಂಧು ಬಳಗ ಹಾಗೂ ಅಪಾರ ಅಭಿಮಾನಿ, ಸ್ನೇಹಿತರನ್ನು ಅಗಲಿದ್ದಾರೆ.

Comments are closed.