
ಮುಂಬೈ: ನಗರದ ಖೈರಾನಿ ರಸ್ತೆ ಬಳಿ ಅಂಗಡಿಯೊಂದರಲ್ಲಿ ಸೋಮವಾರ ನಸುಕಿನ ಜಾವ ಸಂಭವಿಸಿದ ಅಗ್ನಿ ಅವಘಡದಲ್ಲಿ ಕನಿಷ್ಠ 12 ಮಂದಿ ಮೃತಪಟ್ಟಿದ್ದಾರೆ.
ಅಗ್ನಿ ಅವಘಡಕ್ಕೆ ಕಾರಣ ಇನ್ನೂ ನಿಖರವಾಗಿ ತಿಳಿದುಬಂದಿಲ್ಲ. ಬೆಂಕಿಯನ್ನು ಆರಿಸಲು ಎರಡಕ್ಕೂ ಅಧಿಕ ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಆಗಮಿಸಿದೆ. ಪರಿಸ್ಥಿತಿ ಸದ್ಯ ಹತೋಟಿಗೆ ಬಂದಿದೆ.
ಬೆಂಕಿ ಹತ್ತಿ ಉರಿದುಕೊಳ್ಳುವಾಗ ಕಟ್ಟಡದೊಳಗೆ ಜನರು ನಿದ್ದೆ ಮಾಡುತ್ತಿದ್ದವರು ಬೆಂಕಿಗೆ ಆಹುತಿಯಾಗಿದ್ದಾರೆ. ಹೊರಗೆ ಮಲಗಿದ್ದವರು ಅಪಾಯದಿಂದ ಪಾರಾಗಿದ್ದಾರೆ.
ಇನ್ನೊಂದು ಘಟನೆಯಲ್ಲಿ ನವಿ ಮುಂಬೈಯಲ್ಲಿ ನಿನ್ನೆ ಸಾಯಂಕಾಲ ರಾಸಾಯನಿಕ ಘಟಕವೊಂದರಲ್ಲಿ ಭಾರೀ ಅಗ್ನಿ ಅವಘಡ ಉಂಟಾಗಿದ್ದು ಯಾರಿಗೂ ಅಪಾಯವುಂಟಾಗಿಲ್ಲ.
Comments are closed.