ಮುಂಬೈ

ಕ್ಯಾನ್ಸರ್‌ಗೆ ಪೊಲೀಸ್‌ ನಾಯಿ ಬಲಿ; ನೆಟ್ಟಿಗರ ಕಣ್ಣೀರು

Pinterest LinkedIn Tumblr


ಮುಂಬಯಿ: ನಗರ ಪೊಲೀಸ್‌ ಇಲಾಖೆಗೆ ಆರು ವರ್ಷಗಳ ಕಾಲ ಸೇವೆ ಸಲ್ಲಿಸಿ 44 ಪ್ರಕರಣಗಳನ್ನು ಬಗೆಹರಿಸುವಲ್ಲಿ ಸಹಾಯ ಮಾಡಿದ್ದ ಬಾಂಬ್‌ ಪತ್ತೆ ದಳದ ರೂಬಿ ಪೊಲೀಸ್‌ ನಾಯಿ ಕ್ಯಾನ್ಸರ್‌ನಿಂದಾಗಿ ಮೃತಪಟ್ಟಿದ್ದು ಇದರ ನೆನಪಿಗೆ ನಗರ ಪೊಲೀಸ್‌ ಇಲಾಖೆ ಸಿದ್ಧಪಡಿಸಿದ ವೀಡಿಯೋ ವೈರಲ್‌ ಆಗಿದೆ.

2009ರ ಜೂನ್‌ನಲ್ಲಿ ಕೆ-9 ಬಾಂಬ್‌ ನಿಗ್ರಹ ದಳಕ್ಕೆ ಸೇರ್ಪಡೆಗೊಂಡ ರೂಬಿ ಹಲವಾರು ಹೈಪ್ರೊಫೈಲ್‌ ಪ್ರಕರಣ ಸೇರಿದಂತೆ ಇತರೇ ಅಪರಾಧಗಳನ್ನು ಪತ್ತೆಹಚ್ಚುವಲ್ಲಿ ಪ್ರಶಂಸನೀಯ ಕೆಲಸ ಮಾಡಿತ್ತು. 2015ರಲ್ಲಿ ಖೇರ್‌ ಈಸ್ಟ್‌ನಲ್ಲಿ ನಡೆದಿದ್ದ ಭೀಕರ ಕೊಲೆ ಪ್ರಕರಣವನ್ನು ಕೇವಲ ಚಪ್ಪಲ್‌ ಮೂಸಿಕೊಂಡೇ ಅಪರಾಧಿಯನ್ನು ಪತ್ತೆಹಚ್ಚಿದ್ದ ರೂಬಿ ಇಲಾಖೆಯಲ್ಲಿ ಎಲ್ಲರ ಅಚ್ಚುಮೆಚ್ಚಿನ ನಾಯಿಯಾಗಿತ್ತು.
ಈ ನಾಯಿ ಪೊಲೀಸ್‌ ಪೇದೆ ನರೇಶ್‌ ಮೋರೆ ಮತ್ತು ಸಂದೀಪ್‌ ಶೇಶಪ್ಪರಿಂದ ತರಬೇತಿ ಪಡೆದಿತ್ತು. ಕ್ಯಾರ್ಸಿನೋಮ ಎಂಬ ಕ್ಯಾನ್ಸರ್‌ನಿಂದ ಬಳಲುತ್ತಿದ್ದ ರೂಬಿ ಇತ್ತೀಚೆಗೆ ಮೃತಪಟ್ಟಿತ್ತು. ಹೀಗಾಗಿ ಸರಕಾರಿ ಗೌರವಗಳೊಂದಿಗೆ ರೂಬಿಯ ಅಂತ್ಯಕ್ರಿಯೆ ನಡೆಸಿ ಅಸ್ಥಿಯನ್ನು ನದಿಯಲ್ಲಿ ವಿಸರ್ಜಿಸಲಾಗಿತ್ತು.
ಈ ಎಲ್ಲಾ ಚಿತ್ರಗಳನ್ನು ಒಟ್ಟು ಸೇರಿದ ವೀಡಿಯೋ ಮಾಡಿರುವ ಮುಂಬಯಿ ಪೊಲೀಸ್‌ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿದ್ದರು. ಈ ವೀಡಿಯೋ ನೋಡಿದ ನೆಟಿಜನ್‌ಗಳು ಕಣ್ಣೀರು ಹಾಕಿದ್ದಾರೆ.

Comments are closed.