ಮುಂಬೈ

30 ದಿನಗಳಲ್ಲಿ ಆರ್‌ಕಾಮ್‌ ವೈರ್‌ಲೆಸ್‌ ಬಿಸಿನೆಸ್‌ ಸ್ಥಗಿತ?

Pinterest LinkedIn Tumblr


ಮುಂಬಯಿ: ರಿಲಯನ್ಸ್‌ ಕಮ್ಯುನಿಕೇಶನ್ಸ್‌ ಮುಂದಿನ 30 ದಿನಗಳಲ್ಲಿ ತಮ್ಮ ಪ್ರಮುಖ ಭಾಗವಾದ ವೈರ್‌ಲೆಸ್‌ ಬಿಸಿನೆಸ್‌ ವಿಭಾಗವನ್ನು ಸ್ಥಗಿತಗೊಳಿಸುವ ಸಾಧ್ಯತೆ ಇದೆ. ರಿಲಯನ್ಸ್‌ ಜಿಯೊದ ಉಚಿತ ಕರೆ, ಅಗ್ಗದ ಡೇಟಾ ಇತ್ಯಾದಿ ಕೊಡುಗೆಗಳ ಪರಿಣಾಮ ಗ್ರಾಹಕರನ್ನು ಕಳೆದುಕೊಂಡಿರುವುದಾಗಿ ಆರ್‌ಕಾಮ್‌ ಹೇಳಿದೆ. ನವೆಂಬರ್‌ 30ಕ್ಕೆ ಉದ್ಯೋಗದ ಕೊನೆಯ ದಿನಾಂಕ ಎಂದು ಆರ್‌ಕಾಮ್‌ ತನ್ನ ಉದ್ಯೋಗಿಗಳಿಗೆ ಸೂಚನೆ ನೀಡಿದೆ.

” ರಿಲಯನ್ಸ್‌ ಕಮ್ಯುನಿಕೇಶನ್ಸ್‌ ತನ್ನ ವೈರ್‌ಲೆಸ್‌ ಬಿಸಿನೆಸ್‌ ಅನ್ನು ಮುಂದಿನ 30 ದಿನಗಳೊಳಗೆ ಸ್ಥಗಿತಗೊಳಿಸುವ ಅನಿವಾರ್ಯತೆಯಲ್ಲಿದೆ. ಬಿಸಿನೆಸ್‌ ಅನ್ನು ಉಳಿಸಲು ಶತ ಪ್ರಯತ್ನ ಮಾಡಿದ್ದರೂ, 30 ದಿನಕ್ಕಿಂತ ಹೆಚ್ಚು ಕಾಲ ನಡೆಸುವ ಸಾಧ್ಯತೆ ಇಲ್ಲವಾಗಿದೆ” ಎಂದು ಆರ್‌ಕಾಮ್‌ನ ಸಿಇಒ ಗುರ್ದೀಪ್‌ ಸಿಂಗ್‌ ಕಂಪನಿಯ ಉದ್ಯೋಗಿಗಳಿಗೆ ತಿಳಿಸಿದ್ದಾರೆ ಎನ್ನಲಾಗಿದೆ.

ಆರ್‌ಕಾಮ್‌ನ ಐಎಲ್‌ಡಿ ವಾಯ್ಸ್‌, ಕನ್‌ಸ್ಯೂಮರ್‌ ವಾಯ್ಸ್‌ ಮತ್ತು 4ಜಿ ಡೊಂಗಲ್‌ ಪೋಸ್ಟ್‌ ಪೇಯ್ಡ್‌ ಉಳಿದುಕೊಳ್ಳಲಿದ್ದು, ಇತರ ಎಲ್ಲ ಟೆಲಿಕಾಂ ಸೇವೆ ಸ್ಥಗಿತವಾಗಲಿದೆ. ಆರ್‌ಕಾಮ್‌ನ ಮೊಬೈಲ್‌ ಟವರ್‌ ಬಿಸಿನೆಸ್‌ ಕೂಡ ಮುಂದುವರಿಯಲಿದೆ.

Comments are closed.