ಮುಂಬೈ

ಮುಂಬೈಯ ನಡು ರಸ್ತೆಯಲ್ಲೇ ಯುವತಿಗೆ ಥಳಿಸಿ ಲೈಂಗಿಕ ಕಿರುಕುಳ ನೀಡಿದ ದುಷ್ಕರ್ಮಿಗಳು; ಸಿಸಿಟಿವಿಯಲ್ಲಿ ದೃಶ್ಯ ಸೆರೆ

Pinterest LinkedIn Tumblr

ಮುಂಬೈ: ನಡುರಸ್ತೆಯಲ್ಲೇ ಯುವತಿಯನ್ನು ಭೀಕರವಾಗಿ ಥಳಿಸಿ ಲೈಂಗಿಕ ಕಿರುಕುಳ ನೀಡಿರುವ ಘಟನೆ ಮುಂಬೈನಲ್ಲಿ ನಡೆದಿದೆ.

ಮುಂಬೈನ ನೆಹರೂ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದ್ದು, ಮನೆಗೆ ವಾಪಾಸ್ ಆಗುತ್ತಿದ್ದ ಯುವತಿಯನ್ನು ಕೆಲ ದುಷ್ಕರ್ಮಿಗಳು ಚುಡಾಯಿಸಿದ್ದಾರೆ. ಬಳಿಕ ಯುವತಿ ಆ ತಂಡವನ್ನು ಈ ಬಗ್ಗೆ ಪ್ರಶ್ನಿಸಿದಾಗ ಅವಾಚ್ಯ ಶಬ್ದಗಳಿಂದ ನಿಂಧಿಸಿ ಮನಸೋ ಇಚ್ಛೆ ಥಳಿಸಿದ್ದಾರೆ. ಯುವಕರ ದಾಳಿ ವೇಳೆ ಅಲ್ಲೇ ಇದ್ದ ಸ್ಥಳೀಯರು ಆಕೆಯ ನೆರವಿಗೆ ಧಾವಿಸಿರಲಿಲ್ಲ. ಇವಿಷ್ಟೂ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಇದೀಗ ರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗುತ್ತಿದೆ.

ಕೃತ್ಯಕ್ಕೆ ಸಂಬಂಧಿಸಿದಂತೆ ನೆಹರೂ ನಗರ ಪೊಲೀಸರು ಐಪಿಸಿ ಸೆಕ್ಷನ್ 324 ಮತ್ತು 506 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕಾಗಿ ಬಲೆ ಬೀಸಿದ್ದಾರೆ.

ಇನ್ನು ಸಂತ್ರಸ್ಥ ಯುವತಿ ಈ ಬಗ್ಗೆ ಮಾಧ್ಯಮಗಳೊಂದಿಗೆ ಹೇಳಿಕೊಂಡಿದ್ದು, ಮನೆಗೆ ವಾಪಾಸ್ ಆಗುತ್ತಿದ್ದಾಗ ಕೆಲ ಕಿಡಿಕೇಡಿಗಳ ಗುಂಪು ನನ್ನನ್ನು ಅಸಹ್ಯವಾಗಿ ಕರೆದರು. ಇದರಿಂದ ಕೋಪಗೊಂಡ ನಾನು ನಿಮಗೆ ಮಾಡಲು ಏನೂ ಕೆಲಸವಿಲ್ಲವೇ ಎಂದು ಬೈಯ್ದುಕೊಂಡು ಮುಂದೆ ನಡೆದೆ. ಅಷ್ಟರಲ್ಲೇ ಗುಂಪಿನೊಳಗಿದ್ದ ವ್ಯಕ್ತಿಯೋರ್ವ ನನ್ನ ಬಳಿ ಬಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ. ನಿನ್ನ ತಾಯಿ, ಅಕ್ಕ-ತಂಗಿಯರಿಗೂ ಹೀಗೆ ಹೇಳುತ್ತೀಯಾ ಎಂದಾಗ ನನ್ನ ಜುಟ್ಟು ಹಿಡಿದು ಮನಸೋ ಇಚ್ಚೆ ಥಳಿಸಿದ. ಕೆಲ ಕಾಲ ನನಗೆ ಜ್ಞಾನವೇ ಇರಲಿಲ್ಲ. ಆ ಘಟನೆ ವೇಳೆ ಆ ಪ್ರದೇಶದಲ್ಲಿ ಸಾಕಷ್ಟು ಮಂದಿ ಇದ್ದರೂ ಯಾರೂ ನನ್ನ ನೆರವಿಗೆ ಧಾವಿಸಲಿಲ್ಲ. ಬಳಿಕ ನಾನೇ ಸುಧಾರಿಸಿಕೊಂಡು ಮನೆಗೆ ವಾಪಸ್ ಆದೆ ಎಂದು ಹೇಳಿಕೊಂಡಿದ್ದಾಳೆ.

Comments are closed.