ಕರ್ನಾಟಕ

ಸಾಂಗ್ಲಿ: ಕಲ್ಲಿನ ನೆಲಹಾಸು ಸಾಗಿಸುತ್ತಿದ್ದ ಲಾರಿ ಪಲ್ಟಿಯಾಗಿ 11 ಮಂದಿ ಸಾವು

Pinterest LinkedIn Tumblr

ಸಾಂಗ್ಲಿ: ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆ ವ್ಯಾಪ್ತಿಯಲ್ಲಿ ಶನಿವಾರ ಬೆಳಿಗ್ಗೆ ಸಂಭವಿಸಿದ ಅಪಘಾತದಲ್ಲಿ 11 ಮಂದಿ ಮೃತಪಟ್ಟಿದ್ದು, ಐದು ಮಂದಿ ಗಾಯಗೊಂಡಿದ್ದಾರೆ.

ಮಹರಾಷ್ಟ್ರದ ಸಾಂಗ್ಲಿಯಲ್ಲಿ ಬೆಳ್ಳಂಬೆಳಿಗ್ಗೆ ಜವರಾಯ ಅಟ್ಟಹಾಸ ಮೆರೆದಿದ್ದು, ಸಾಂಗ್ಲಿ ಸಮೀಫದ ಸಾತಗಾವ ಬಳಿ ಟೈಲ್ಸ್ ತುಂಬಿದ್ದ ಲಾರಿ ಪಲ್ಟಿಯಾಗಿ ಹನ್ನೊಂದು ಮಂದಿ ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ಇಂದು ಮುಂಜಾನೆ ಸಂಭವಿಸಿದೆ. ಮೃತರೆಲ್ಲರೂ ಕರ್ನಾಟಕದ ವಿಜಯಪುರ ಜಿಲ್ಲೆಯವರೆಂದು ಗುರುತಿಸಲಾಗಿದೆ. ಸಾವನ್ನಪ್ಪಿದವರು ವಿಜಯಪುರ, ಸಿಂದಗಿ ಮತ್ತು ತಾಳಿಕೋಟೆ ತಾಲ್ಲೂಕಿನವರೆಂದು ತಿಳಿದುಬಂದಿದೆ.

ಸದ್ಯಕ್ಕೆ ಮೃತಪಟ್ಟವರಲ್ಲಿ ಮೂವರು ಮಹಿಳೆಯರು ಹಾಗು ಏಳು ಮಂದಿ ಪುರುಷರು ಸಾವನ್ನಪ್ಪಿದ್ದಾರೆ. ಮಹಾರಾಷ್ಟ್ರದಲ್ಲಿ ಕಳೆದ ಐದು ದಿನಗಳಿಂದ ರಾಜ್ಯ ರಸ್ತೆಸಾರಿಗೆ ಸಂಸ್ಥೆಯ ಬಸ್ ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೂಲಿ ಕಾರ್ಮಿಕರು ಟ್ರಕ್‌ನಲ್ಲಿ ಮಹಾರಾಷ್ಟ್ರಕ್ಕೆ ತೆರಳುತ್ತಿದ್ದ ವೇಳೆ ಈ ದುರ್ಘಟನೆ ಸಂಭವಿಸಿದೆ.

ಮೃತರು ಮತ್ತು ಗಾಯಗೊಂಡವರು ಕಲಬುರಗಿ ಜಿಲ್ಲೆಯ ಶಾಹಬಾದ, ಜೇವರ್ಗಿ ಯಾದಗಿರ ಜಿಲ್ಲೆಯ ಶಹಾಪುರ, ವಿಜಯಪುರ ಜಿಲ್ಲೆಯ ಸಿಂದಗಿ ಮತ್ತು ತಾಳಿಕೋಟೆ, ಬೆಳಗಾವಿ ಜಿಲ್ಲೆಯ ಅಥಣಿ ಮತ್ತು ಮಹಾರಾಷ್ಟ್ರದ ಮೀರಜ್‌ನವರೆಂದು ತಿಳಿದುಬಂದಿದೆ..

ಅಪಘಾತದಲ್ಲಿ ಸಾವನ್ನಪ್ಪಿದ ದುರ್ದೈವಿಗಳು ಕಲಬುರಗಿ ಜಿಲ್ಲೆಯ ಶಾಹಬಾದಿನ ಇಂದ್ರಿಬಾಯಿ ಶಾಮರಾವ ನಿಂಬಾಳಕರ (೩೦), ನಾಗಮ್ಮ ಶಾಮರಾವ (೮), ಜೇವರ್ಗಿಯ ಸಾಹೇಬ ಮಾಗದಪ್ಪ (೬೫), ಯಾದಗಿರ ಜಿಲ್ಲೆಯ ಶಹಾಪುರಿನ ಸಂತೋಷ ಮಹಾದೇವ ಮುಂಗಡೆ (೧೬), ವಿಜೆಯಪುರ ಸಿಂದಗಿಯ ಲಕ್ಷ್ಮಣ ಪ್ರಭು ಮಾದರ (೪೦), ಲಕ್ಷ್ಮೀ ಲಕ್ಷ್ಮಣ ಮಾದರ (೩೦), ತಾಳಿಕೊಟೆಯ ಪರಸುರಾಮ ಯಲ್ಲಪ್ಪಾ ಪೂಜಾರಿ (೨೫), ಮಹಾರಾಷ್ಟ್ರದ ಮಿರಜಿನ ರಿತೇಶ ಶಿವಾಜಿ ರಾಠೋಡ (೨೫), ಬೆಳಗಾವಿ ಅಥಣಿಯ ಬಸಮ್ಮ ಯಲ್ಲಪ್ಪಾ ಪೂಜಾರಿ (೪೫) ಎಂದು ಗುರುತಿಸಲಾಗಿದೆ.

ಅಪಘಾತದಲ್ಲಿ ೧೧ ಮಂದಿ ಗಂಭೀರವಾಗಿ ಗಾಯಗೊಂಡಿದ್ದು ಅವರನ್ನು ಮೀರಜ್ ಮತ್ತು ಸಾಂಗ್ಲಿಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ

Comments are closed.