ಮುಂಬೈ

ಗುರುದಕ್ಷಿಣೆಯಾಗಿ ತನ್ನ ಯೋಗಗುರುಗೆ 2 ಕೋಟಿ ಐಷಾರಾಮಿ ಮನೆ ನೀಡಿದ ಕಂಗನಾ

Pinterest LinkedIn Tumblr


ಮುಂಬೈ: ಬಾಲಿವುಡ್‌ ಬೆಡಗಿ ಕಂಗನಾ ರನೌತ್ ₹ 2 ಕೋಟಿ ಮೌಲ್ಯದ ಫ್ಲ್ಯಾಟ್‌ ಅನ್ನು ತಮ್ಮ ಯೋಗಗುರುವಿಗೆ ಗುರುದಕ್ಷಿಣೆಯಾಗಿ ನೀಡಿದ್ದಾರೆ.

ಪಶ್ಚಿಮ ಅಂಧೇರಿಯಲ್ಲಿರುವ ಎರಡು ಬೆಡ್‌ರೂಮ್‌ನ ಫ್ಲ್ಯಾಟ್‌ ಅನ್ನು ಯೋಗಗುರು ಸೂರ್ಯನಾರಾಯಣ ಸಿಂಗ್‌ ಅವರಿಗೆ ಕಾಣಿಕೆಯಾಗಿ ನೀಡಿದ್ದಾರೆ.

ಈ ಮನೆಯಲ್ಲಿ ಎರಡು ಬೆಡ್‌ರೂಮ್‌ ಜತೆಗೆ ವಿಶಾಲವಾದ ಬಾಲ್ಕನಿ ಇದೆ. ಈ ಸ್ಥಳದಲ್ಲಿ ಸಿಂಗ್‌ ಅವರು ತಮ್ಮ ವಿದ್ಯಾರ್ಥಿಗಳಿಗೆ ಯೋಗ ಪಾಠ ಹೇಳಿಕೊಡಬಹುದು ಎಂದು ಕಂಗನಾ ಹೇಳಿದ್ದಾರೆ.

ಐಷಾರಾಮಿ ಫ್ಲ್ಯಾಟ್‌ ಅನ್ನು ಕಾಣಿಕೆಯಾಗಿ ನೀಡಿರುವ ನಟಿ, ಮನೆ ನೀಡುವ ಮೊದಲು ಅದರ ವಿನ್ಯಾಸ ಬದಲಿಸಿದ್ದಾರೆ. ಯೋಗಪಾಠಕ್ಕೆ ಅನುಕೂಲವಾಗುವಂತೆ ಫ್ಲ್ಯಾಟ್‌ನ ಒಳಾಂಗಣ ಸಿದ್ಧಪಡಿಸಿದ್ದಾರೆ.

ಕಂಗನಾ ಈ ಹಿಂದೆ ತಮ್ಮ ಸಹೋದರಿ ರಂಗೋಲಿ ಚಾಂದೇಲ್‌ ಅವರ ವಿವಾಹ ಸಂದರ್ಭದಲ್ಲಿ ಎರಡು ಬೆಡ್‌ರೂಮಿನ ಮನೆಯೊಂದನ್ನು ಅವರಿಗೆ ಕಾಣಿಕೆ ನೀಡಿದ್ದರು.

Comments are closed.