ಕರ್ನಾಟಕ

ಉಗಾಂಡ ಯುವತಿ ಕೊಲೆ ಪ್ರಕರಣ; ಎರಡು ಬಾರಿ ಸೆಕ್ಸ್​ ಮಾಡಿದ್ದರಿಂದ 10 ಸಾವಿರ ಬೇಡಿಕೆ ಕೊಲೆಗೆ ಕಾರಣ

Pinterest LinkedIn Tumblr


ಬೆಂಗಳೂರು(ಫೆ. 06): ಕೊತ್ತನೂರಿನಲ್ಲಿ ನಡೆದಿದ್ದ ಉಗಾಂಡ ಯುವತಿ ಫ್ಲೋರೆನ್ಸ್​ ಕೊಲೆ ಪ್ರಕರಣಕ್ಕೆ ಹೊಸ ಟ್ವಿಸ್ಟ್​ ಸಿಕ್ಕಿದೆ. ಆರೋಪಿ ಇಶಾನ್​ ವಿಚಾರಣೆ ನಡೆಸುತ್ತಿರುವ ಪೊಲೀಸರಿಗೆ ಒಂದು ಇಂಟ್ರಸ್ಟಿಂಗ್​ ಮಾಹಿತಿ ಸಿಕ್ಕಿದೆ. ಅಂದಿನ ಕೊಲೆಗೆ ಕಾರಣವಾಗಿದ್ದು ಎರಡನೇ ಬಾರಿ ನಡೆದ ಸೆಕ್ಸ್ ಅಟೆಂಪ್ಟ್.
ಐದು ಸಾವಿರ ರೂಪಾಯಿ ಹಣಕ್ಕೆ ಸೆಕ್ಸ್’​ಗಾಗಿ ಇಶಾನ್​ ಮತ್ತು ಫ್ಲೋರೆನ್ಸ್​ ನಡುವೆ ಒಪ್ಪಂದವಾಗಿರುತ್ತದೆ. ಫ್ಲೋರೆನ್ಸ್​ ಪ್ರಕಾರ ಆ ಒಪ್ಪಂದವಾಗಿದ್ದು ಕೇವಲ ಒಂದು ಬಾರಿಗೆ ಮಾತ್ರ. ಆದ್ರೆ ಕುಡಿತದ ನಶೆಯಲ್ಲಿದ್ದ ಇಶಾನ್ ಆ ರಾತ್ರಿ 2 ಬಾರಿ ಆಕೆಯೊಂದಿಗೆ ಸೆಕ್ಸ್​ ಮಾಡಿರುತ್ತಾನೆ. ಸೆಕ್ಸ್​ ಮುಗಿದ ಮೇಲೆ ಒಪ್ಪಂದವಾದಂತೆ ಇಶಾನ್​ ಉಗಾಂಡ ಯುವತಿಗೆ 5 ಸಾವಿರ ಹಣ ಕೊಟ್ಟಿರುತ್ತಾನೆ. ಆದ್ರೆ ಈ ವೇಳೆ ಫ್ಲೋರೆನ್ಸ್​ ಕಿರಿಕ್​ ಮಾಡುತ್ತಾಳೆ. ಎರಡು ಬಾರಿ ಸೆಕ್ಸ್​ ಮಾಡಿದ್ದರಿಂದ 10 ಸಾವಿರ ಕೊಡಬೇಕು ಅಂತ ಬೇಡಿಕೆಯಿಟ್ಟಿರುತ್ತಾಳೆ. ಈ ವೇಳೆ ಇಬ್ಬರ ನಡುವೆ ಜಗಳ ಆರಂಭವಾಗಿದೆ. ಇದು ವಿಕೋಪಕ್ಕೆ ತಿರುಗಿದಾಗ ಫ್ಲೋರೆನ್ಸ್​ ಮನೆಯಲ್ಲಿನ ಚಾಕುವಿನಿಂದ ಇಶಾನ್​ ಮೇಲೆ ಆರು ಬಾರಿ ಹಲ್ಲೆ ನಡೆಸಿರುತ್ತಾಳೆ. ಸಿಟ್ಟಿಗೆದ್ದ ಇಶಾನ್​ ಚಾಕುವನ್ನು ಕಿತ್ತುಕೊಂಡು ಆಕೆಯನ್ನೇ ಬರ್ಬರವಾಗಿ ಕೊಲೆ ಮಾಡಿಬಿಡುತ್ತಾನೆ. ವಿಚಾರಣೆ ವೇಳೆ ಈ ವಿಷಯವನ್ನು ಇಶಾನ್ ಪೊಲೀಸರಿಗೆ ತಿಳಿಸಿದ್ದಾನೆ.

Comments are closed.