ಮುಂಬೈ

ಎಟಿಎಂನಿಂದ 24 ಸಾವಿರ ತೆಗೆಯಲು ಅನುಮತಿಸಿದ ಭಾರತೀಯ ರಿಸರ್ವ್‌ ಬ್ಯಾಂಕ್‌

Pinterest LinkedIn Tumblr


ಮುಂಬೈ: ಎಟಿಎಂಗಳಿಂದ ಪ್ರತಿ ದಿನ ಹಣ ತೆಗೆಯುವ ಮಿತಿಯನ್ನು ಭಾರತೀಯ ರಿಸರ್ವ್‌ ಬ್ಯಾಂಕ್‌ (ಆರ್‌ಬಿಐ) ಸೋಮವಾರ ತೆಗೆದು ಹಾಕಿದೆ.

ಈ ಸಂಬಂಧ ಆರ್‌ಬಿಐ ಸೋಮವಾರ ಅಧಿಸೂಚನೆ ಹೊರಡಿಸಿದೆ. ಫೆಬ್ರುವರಿ 1 ರಿಂದ ಗ್ರಾಹಕರು ಎಟಿಎಂನಿಂದ ಗರಿಷ್ಠ ₹24 ಸಾವಿರ ಹಣ ತೆಗೆಯಬಹುದಾಗಿದೆ. ಆದರೆ, ಒಂದು ವಾರದಲ್ಲಿ ಗ್ರಾಹಕರು ತಮ್ಮ ಖಾತೆಯಿಂದ ತೆಗೆಯಲು ನಿಗದಿ ಪಡಿಸಿರುವ ₹24 ಸಾವಿರದ ಮಿತಿಯನ್ನು ಹಾಗೆಯೇ ಮುಂದುವರೆಸಿದೆ.

ಓವರ್ ಡ್ರಾಫ್ಟ್ ಹಾಗೂ ಚಾಲ್ತಿ ಖಾತೆ ಹೊಂದಿರುವವರಿಗೂ ವಿದಿಸಿದ್ದ ನಿರ್ಬಂಧವನ್ನು ತೆಗೆದು ಹಾಕಲಾಗಿದೆ.

ನವೆಂಬರ್‌ 8ರಂದು ಪ್ರಧಾನಿ ನರೇಂದ್ರ ಮೋದಿ ಅವರು ₹500 ಮತ್ತು ₹1000 ಮುಖಬೆಲೆಯ ನೋಟುಗಳ ಚಲಾವಣೆ ರದ್ದುಗೊಳಿಸುವ ನಿರ್ಧಾರ ಪ್ರಕಟಿಸಿದ ನಂತರ, ಆರ್‌ಬಿಐ ಪ್ರತಿ ದಿನ ಎಟಿಎಂನಿಂದ ತೆಗೆಯುವ ಹಣದ ಮೇಲೆ ಮಿತಿಯನ್ನು ನಿಗದಿ ಪಡಿಸಿತ್ತು.

Comments are closed.