ರಾಷ್ಟ್ರೀಯ

ಸಮಾಜವಾದಿಯೊಂದಿಗಿನ ಮೈತ್ರಿ ಮುಲಾಯಂಗಾಗಿ ಅಲ್ಲ ಅಖಿಲೇಶ್‌ಗಾಗಿ: ಕಾಂಗ್ರೆಸ್

Pinterest LinkedIn Tumblr


ನವದೆಹಲಿ, ಜ. ೩೦- ದೇಶದ ಅತಿಹಳೆಯದಾದ ಕಾಂಗ್ರೆಸ್ ಪಕ್ಷ ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಾರ್ಟಿಯೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವುದು ಯುವ ನಾಯಕ ಅಖಿಲೇಶ್ ಯಾದವ್ ಮುಖನೋಡಿ, ಅವರ ಅಪ್ಪ ಮುಲಾಯಂಗಾಗಿ ಅಲ್ಲ ಎಂದು ಹೇಳಿದೆ.
ನಿನ್ನೆ ಮುಲಾಯಂ ಸಿಂಗ್ ಕಾಂಗ್ರೆಸ್ ಜತೆ ಎಸ್‌ಪಿ ಮೈತ್ರಿ ಮಾ‌ಡಿಕೊಂಡಿರುವುದನ್ನು ವಿರೋಧಿಸಿದ್ದರ ಬೆನ್ನಲ್ಲೇ ಕಾಂಗ್ರೆಸ್ ಮುಖಂ‌ಡ ಸಂದೀಪ್ ದೀಕ್ಷಿತ್ ಈ ಸ್ಪಷ್ಟನೆ ನೀಡಿ, ತಮ್ಮ ಪಕ್ಷವೇನು ಮುಲಾಯಂ ಮುಖ ನೋಡಿ ಮೈತ್ರಿ ಮಾಡಿಕೊಂ‌ಡಿಲ್ಲ. ಎಸ್.ಪಿ. ಯುವ ನಾಯಕ ಯು.ಪಿ. ಮುಖ್ಯಮಂತ್ರಿ ಅಖಿಲೇಶ್ ಅವರ ಆಸಕ್ತಿಯಿಂದ ಮಾತ್ರ ಮಾಡಿಕೊಳ್ಳಲಾಗಿದೆ ಎಂದು ಹೇಳುವ ಮೂಲಕ ಸಮಾಜವಾದಿ ಪಕ್ಷದ ಸಂಸ್ಥಾಪಕರ ಅಸಂತೋಷವನ್ನು ಅಲಕ್ಷಿಸುವ ಪ್ರಯತ್ನ ಮಾ‌ಡಿದೆ.
ಮುಲಾಯಂ ಹೇಳಿರುವುದು ಅವರ ವೈಯಕ್ತಿಕ ಅಭಿಪ್ರಾಯ; ನಾವು ಮೈತ್ರಿ ಮಾಡಿಕೊಂಡಿರುವ ಅಖಿಲೇಶ್ ನಾಯಕತ್ವದಲ್ಲಿ, ಈ ಬೆಳವಣಿಗೆ ಅವರಿಗೆ ಇಷ್ಟವಾಗದಿದ್ದರೆ ಅದು ಅವರ ಪಕ್ಷದೊಳಗಿನ ಆಂತರಿಕ ವಿಚಾರ, ಅದಕ್ಕೂ ನಮಗೂ ಸಂಬಂಧವಿಲ್ಲ. ಈ ಮೈತ್ರಿ ಈಗ ಚೆನ್ನಾಗಿಯೇ ನ‌ಡೆಯುತ್ತಿದೆ. ಅಖಿಲೇಶ್ ಅವರ ಜೊತೆಗೆ ಹೆಚ್ಚಿನ ಮತದಾರರು ಮತ್ತು ಪಕ್ಷದ ಮುಖಂ‌ಡರಿದ್ದಾರೆ. ಹಾಗಿದ್ದಾಗ ಅವರ ತಂದೆಯ ಅಭಿಪ್ರಾಯಗಳಿಗೆ ಯಾವ ಬೆಲೆಯೂ ಇಲ್ಲ ಎಂದು ದೀಕ್ಷಿತ್ ತಿರುಗೇಟು ನೀಡಿದರು.

Comments are closed.