ಮುಂಬೈ

ಪತ್ತೆಯಾಗಿರುವ ನಕಲಿ ನೋಟುಗಳ ಮಾಹಿತಿ ಇಲ್ಲವೆಂದ ಆರ್‌ಬಿಐ

Pinterest LinkedIn Tumblr


ಮುಂಬೈ: ₹500 ಮತ್ತು ₹1000 ಮುಖಬೆಲೆಯ ನೋಟು ರದ್ಧತಿ ಬಳಿಕ ಪತ್ತೆಯಾಗಿರುವ ನಕಲಿ ನೋಟುಗಳ ಸಂಖ್ಯೆ ಅಥವಾ ಮೊತ್ತದ ಕುರಿತು ಆರ್‌ಬಿಐ ಬಳಿ ಸ್ಪಷ್ಟ ಮಾಹಿತಿ ಇಲ್ಲ!

ಪತ್ತೆಯಾಗಿರುವ ನಕಲಿ ನೋಟುಗಳ ಕುರಿತು ಪ್ರಸ್ತುತ ಸ್ಪಷ್ಟ ಮಾಹಿತಿ ಇಲ್ಲ ಎಂದು ಭಾರತೀಯ ರಿಸರ್ವ್‌ ಬ್ಯಾಂಕ್‌(ಆರ್‌ಬಿಐ)ನ ಕರೆನ್ಸಿ ನಿರ್ವಹಣಾ ವಿಭಾಗ ಆರ್‌ಟಿಐ ಮೂಲಕ ಕೇಳಲಾದ ಪ್ರಶ್ನೆಗೆ ಉತ್ತರಿಸಿದೆ.

ನೋಟು ರದ್ಧತಿಯ ಬಳಿಕ ನವೆಂಬರ್‌ 8ರಿಂದ ಡಿಸೆಂಬರ್‌ 10ರ ವರೆಗೂ ಪತ್ತೆಯಾಗಿರುವ ನಕಲಿ ನೋಟುಗಳ ಮೊತ್ತ, ಬ್ಯಾಂಕ್‌ ಹೆಸರು, ದಿನಾಂಕ ಹಾಗೂ ಇತರೆ ಮಾಹಿತಿಯನ್ನು ನೀಡುವಂತೆ ಅನಿಲ್‌ ವಿ.ಗಲ್ಗಲಿ ಎಂಬುವವರು ಆರ್‌ಟಿಐ ಅರ್ಜಿ ಸಲ್ಲಿಸಿದ್ದರು.

ನೋಟು ರದ್ಧತಿ ನಿರ್ಧಾರವು ನಕಲಿ ನೋಟುಗಳ ಪತ್ತೆ ಮತ್ತು ನಿಗ್ರಹಕ್ಕೆ ಸಹಕಾರಿಯಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದರು. ಆದರೆ, ಪತ್ತೆಯಾಗಿರುವ ನಕಲಿ ನೋಟುಗಳ ಬಗ್ಗೆ ಮಾಹಿತಿಯೇ ಇಲ್ಲ.

ಹಾಗಾಗಿ, ಅಪಮೌಲ್ಯೀಕರಣ ನಿರ್ಧಾರ ಶಸ್ತ್ರವಾಗಿ ಬಳಕೆಯಾಗಲಿದೆ ಎಂಬುದು ಸುಳ್ಳಾದಂತಾಗಿದೆ ಎಂದು ಗಲ್ಗಲಿ ಅಭಿಪ್ರಾಯಪಟ್ಟಿದ್ದಾರೆ.

Comments are closed.