ಮುಂಬೈ

ಕಂಚಿನ ಕಂಠದ ಬಾಲಿವುಡ್’ನ ಖ್ಯಾತ ನಟ ಓಂ ಪುರಿ ವಿಧಿವಶ

Pinterest LinkedIn Tumblr

ಮುಂಬೈ: ಬಾಲಿವುಡ್’ನ ಖ್ಯಾತ ಹಿರಿಯ ನಟ ಓಂ ಪುರಿ ವಿಧಿವಶರಾಗಿದ್ದಾರೆ. ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗಿದ್ದ ನಟ ಓಂ ಪುರಿಗೆ 66 ವರ್ಷ ವಯಸ್ಸಾಗಿತ್ತು. ದುರದೃಷ್ಟವಶಾತ್ ಇಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಕಂಚಿನ ಕಂಠದ ನಟ ಓಂ ಪುರಿ 1950ರ ಅಕ್ಟೋಬರ್ 18ರಂದು ಹರಿಯಾಣದ ಅಂಬಾಲ ಗ್ರಾಮದಲ್ಲಿ ಜನಿಸಿದ್ದರು. ಈವರೆಗೂ ಸುಮಾರು 120 ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದ ಇವರು 5 ಅಂತರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾಗಿದ್ದರು.

ಕನ್ನಡ, ಹಿಂದಿ, ಇಂಗ್ಲೀಷ್ ಸೇರಿದಂತೆ ಒಟ್ಟು 6 ಭಾಷೆಗಳಲ್ಲಿ ನಟಿಸಿದ ಕೀರ್ತಿ ಓಂ ಪುರಿಯವರದ್ದು. ಇವರು ನಟಿಸಿದ್ದ ಎ. ಕೆ. 47 ಎಂಬ ಕನ್ನಡ ಸಿನಿಮಾ ಸಾಕಷ್ಟು ಪ್ರಸಿದ್ಧಿ ಪಡೆದಿತ್ತು. ಓಂ ಪುರಿ ಅವರ ನಿಧನಕ್ಕೆ ಬಾಲಿವುಡ್ ನಿರ್ದೇಶಕರು, ನಟರು ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

Comments are closed.