ಮುಂಬೈ

ನೋಟು ನಿಷೇಧದಿಂದ ಭಯೋತ್ಪಾದನೆ ನಿಂತಿಲ್ಲ: ಶಿವಸೇನೆ

Pinterest LinkedIn Tumblr

sanjay-rautಮುಂಬೈ: ಭಯೋತ್ಪಾದನಾ ಚಟುವಟಿಕೆಗಳನ್ನು ನಿಯಂತ್ರಿಸುವುದಕ್ಕಾಗಿ ದುಬಾರಿ ನೋಟಿನ ಮೇಲೆ ನಿಷೇಧ ಹೇರಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿತ್ತು. ಆದರೆ, ಭಯೋತ್ಪಾದನೆ ನಿಯಂತ್ರಣಗೊಳ್ಳುವ ಬದಲಾಗಿ ನೋಟು ನಿಷೇಧ ಬಳಿಕ ಗಡಿಯಲ್ಲಿ ಉಗ್ರರ ದಾಳಿಗಳು ಮತ್ತಷ್ಟು ಹೆಚ್ಚಾಗಿದೆ ಎಂದು ಶಿವಸೇನೆ ಭಾನುವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ಅವರು, ನೋಟು ನಿಷೇಧದ ಬಳಿಕ ಕಾಶ್ಮೀರದಲ್ಲಿ ಉಗ್ರರ ದಾಳಿಗಳು ಮತ್ತಷ್ಟು ಹೆಚ್ಚಾಗಿದೆ. ನೋಟು ನಿಷೇಧದ ಬಳಿಕ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳು ಹಾಗೂ ದಾಳಿಗಳು ಕಡಿಮೆಯಾಗಿದೆ ಎಂದು ಹೇಳಲಾಗುತ್ತಿತ್ತು. ಆದರೆ, ಇದಕ್ಕೆ ತದ್ವಿರುದ್ಧವಾಗಿ ನಡೆಯುತ್ತಿವೆ. ನಿಷೇಧದ ಬಳಿಕ ಉಗ್ರರ ದಾಳಿಗಳು ಮತ್ತಷ್ಟು ಹೆಚ್ಚಾಗಿದೆ ಎಂದು ಹೇಳಿದ್ದಾರೆ.
ಕಳೆದ 2 ವರ್ಷಗಳಿಂದ ಉಗ್ರರ ದಾಳಿಯಲ್ಲಿ ಸಾಕಷ್ಟು ಯೋಧರು ಹುತಾತ್ಮರಾಗಿದ್ದಾರೆ. ಭಾರತೀಯ ಇತಿಹಾಸದಲ್ಲಿಯೇ ಈ ಮಟ್ಟಕ್ಕೆ ಎಂದಿಗೂ ಆಗಿರಲಿಲ್ಲ. ಉಗ್ರರ ದಾಳಿಗಳು ಹೆಚ್ಚಾಗುತ್ತಿರುವ ಕುರಿತಂತೆ ಪ್ರಧಾನಮಂತ್ರಿಗಳು ಹಾಗೂ ರಕ್ಷಣಾ ಸಚಿವರು ಉತ್ತರ ನೀಡಬೇಕಿದೆ ಎಂದು ತಿಳಿಸಿದ್ದಾರೆ.
ಇದೇ ವೇಳೆ ಶ್ರೀನಗರದಲ್ಲಿ ನಿನ್ನೆ ನಡೆದ ಉಗ್ರರ ದಾಳಿ ಕುರಿತಂತೆ ಪ್ರತಿಕ್ರಿಯೆ ನೀಡಿರುವ ಅವರು, ಪಾಕಿಸ್ತಾನಕ್ಕೆ ಭಾರತ ಸರ್ಕಾರ ದಿಟ್ಟ ಉತ್ತರವನ್ನು ನೀಡಬೇಕಿದೆ ಎಂದು ಹೇಳಿದ್ದಾರೆ.

Comments are closed.