ಮುಂಬೈ

ಶಿಶು ಆರೈಕೆ ಕೇಂದ್ರದಲ್ಲಿ ಹತ್ತು ತಿಂಗಳ ಶಿಶುವಿಗೆ ಒದೆ

Pinterest LinkedIn Tumblr

shisuಮುಂಬೈ: ಇಲ್ಲಿನ ಖಾಸಗಿ ಶಿಶು ಆರೈಕೆ ಕೇಂದ್ರದಲ್ಲಿ ಕೆಲಸದಾಕೆಯೊಬ್ಬರು ಹತ್ತು ತಿಂಗಳ ಶಿಶುವನ್ನು ದೈಹಿಕವಾಗಿ ಹಿಂಸಿಸುತ್ತಿರುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕೆಲಸದಾಕೆಯನ್ನು ಅಫ್ಸಾನಾ ಶೇಖ್‌ ಎಂದು ಗುರುತಿಸಲಾಗಿದೆ. ಕೆಲಸದಾಕೆ ಮತ್ತು ಆ ಶಿಶು ಆರೈಕೆ ಕೇಂದ್ರದ ಮಾಲೀಕರನ್ನು ಪೊಲೀಸರು ಬಂಧಿಸಿದ್ದಾರೆ.

ಮಗುವನ್ನು ಕಾಲಿನಿಂದ ಒದ್ದಿರುವುದರಿಂದ ಕಣ್ಣು ಮತ್ತು ತಲೆಗೆ ಗಂಭೀರ ಗಾಯಗಳಾಗಿವೆ. ಕೆಲಸದಾಕೆಯ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಖಂಡನೆ ವ್ಯಕ್ತವಾಗಿದೆ.

Comments are closed.