
ಮುಂಬೈ : ಗ್ರಾಹಕರಿಗೆ ಹಬ್ಬದ ಕೊಡುಗೆಯಾಗಿ, ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಮತ್ತು ಐಸಿಐಸಿಐ ಬ್ಯಾಂಕ್‌ಗಳು ಗೃಹ ಸಾಲದ ಬಡ್ಡಿದರ ಕಡಿತ, ಹೆಚ್ಚುವರಿ ಸಾಲ (ಓವರ್ ಡ್ರಾಫ್ಟ್) ಸೌಲಭ್ಯವನ್ನು ಘೋಷಿಸಿವೆ.
ಎಸ್‌ಬಿಐ ತನ್ನ ಗ್ರಾಹಕರಿಗೆ ಹಬ್ಬದ ಕೊಡುಗೆಯಾಗಿ ₹75 ಲಕ್ಷದವರೆಗಿನ ಗೃಹ ಸಾಲದ ಬಡ್ಡಿದರವನ್ನು ಶೇ 0.15 ರಷ್ಟು ತಗ್ಗಿಸಿದೆ.
ಪರಿಷ್ಕೃತ ಬಡ್ಡಿದರವು ನವೆಂಬರ್ 1 ರಿಂದಲೇ ಜಾರಿಗೆ ಬಂದಿದೆ. ಇದರಿಂದ ಗೃಹ ಸಾಲದ ಬಡ್ಡಿದರವು ಶೇ 9.15 ರಷ್ಟು ಮತ್ತು ಮಹಿಳೆಯರಿಗೆ ಶೇ 9.10ರಷ್ಟಾಗಿದೆ.
ಹೊಸದಾಗಿ ಮನೆ ಖರೀದಿಸುವವರು ಮತ್ತು ಬೇರೆ ಬ್ಯಾಂಕ್‌ಗಳಲ್ಲಿನ ಗೃಹ ಸಾಲವನ್ನು ಎಸ್‌ಬಿಐಗೆ ಬದಲಾಯಿಸಿ ಕೊಳ್ಳುವವರಿಗೆ ಇದರಿಂದ ಅನುಕೂಲ ವಾಗಲಿದೆ ಎಂದು ಬ್ಯಾಂಕ್ ತಿಳಿಸಿದೆ.
ಐಸಿಐಸಿಐ ಬ್ಯಾಂಕ್:
ಐಸಿಐಸಿಐ ಬ್ಯಾಂಕ್ ಗೃಹ ಸಾಲದ ಜತೆಗೆ ಹೆಚ್ಚುವರಿ ಸಾಲವನ್ನೂ ನೀಡಲಿದೆ. ಬ್ಯಾಂಕ್‌ನಲ್ಲಿ ಖಾತೆ ಹೊಂದಿರುವ ವೇತನದಾರರ ಹೆಸರಿನಲ್ಲಿ ಆಸ್ತಿ ಇದ್ದರೆ ಅದಕ್ಕೆ ಪ್ರತಿಯಾಗಿ ಬ್ಯಾಂಕ್ ₹5 ಲಕ್ಷದಿಂದ 1 ಕೋಟಿಯವರೆಗೆ ‘ಐಸಿಐಸಿಐ ಹೋಂ ಓವರ್‌ಡ್ರಾಫ್ಟ್’ ಹೆಸರಿನ ಸಾಲ ಯೋಜನೆ ಪರಿಚಯಿಸಿದೆ.
ಗೃಹ ಅವಧಿ ಸಾಲಕ್ಕೆ ಹೊರತಾಗಿ, ಹೆಚ್ಚುವರಿ ವೆಚ್ಚ ಮತ್ತು ವೈಯಕ್ತಿಕ ಅಗತ್ಯಗಳಿಗೆ ಈ ಓವರ್ ಡ್ರಾಫ್ಟ್ ಸಾಲ ಬಳಸಬಹುದು. ಹೆಚ್ಚುವರಿ ಸಾಲದಲ್ಲಿ ಬಳಸಿಕೊಂಡಿರುವಷ್ಟು ಮೊತ್ತಕ್ಕೆ ಮಾತ್ರವೇ ಬಡ್ಡಿ ಕಡಿತ ಮಾಡಲಾಗುವುದು ಎಂದು ಬ್ಯಾಂಕ್ ತಿಳಿಸಿದೆ.
Comments are closed.