ಮುಂಬೈ: ವಾಣಿಜ್ಯನಗರಿ ಮುಂಬೈನಲ್ಲಿ ಕಳೆದ 48 ಘಂಟೆಗಳಿಂದ ಸುರಿಯುತ್ತಿರುವ ಧಾರಾಕಾರದ ಮಳೆಗೆ ಜನಜೀವನ ತತ್ತರಿಸಿದೆ.
ಕಳೆದ 24 ಘಂಟೆಗಳಲ್ಲಿ ಮುಂಬೈನಲ್ಲಿ ಸುರಿದ ಮಳೆ 84.7 ಮಿಲಿಮೀಟರ್ ಎಂದು ತಿಳಿದುಬಂದಿದೆ. ಮಳೆ ತೀವ್ರತೆ ಇನ್ನು ಹೆಚ್ಚಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮಳೆಯಿಂದ ಹೆದ್ದಾರಿಗಳಲ್ಲಿ ತೀವ್ರ ವಾಹನ ದಟ್ಟಣೆ ಉಂಟುಮಾಡಿದ್ದು, ವಾಹನ ಚಾಲನೆ ಕುಂಟುತ್ತಾ ಸಾಗಿದೆ. ಹಾಗೆಯೇ ಪ್ರಾದೇಶಿಕ ರೈಲುಗಳು ಕೂಡ ನಿಧಾನವಾಗಿ ಚಲಿಸುತ್ತಿವೆ.
ಇಲ್ಲಿಯವರೆಗೂ ಯಾವುದೇ ಅಹಿತಕರ ಘಟನೆ ವರದಿಯಾಗಿಲ್ಲ. ಹಾಗೆಯೇ ಸಮುದ್ರ ತೀರದಲ್ಲಿ ಇಂದು ಸಂಜೆ 3:56 ರಿಂದ ರಾತ್ರಿ 10:11 ವರೆಗೆ ಭಾರಿ ಅಲೆಗಳು ಮೂಡುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ಈ ಮಳೆ ತೊಂದರೆ ಸೃಷ್ಟಿಸಿದ್ದರು, ಮುಂಬೈಗೆ ನೀರು ಸರಬರಾಜು ಮಾಡುವ ಕೆರೆಗಳೆಲ್ಲಾ ತುಂಬಿರುವುದರಿಂದ ಮುಂಬೈ ನಿವಾಸಿಗಳಿಗೆ ಸಂತಸ ಉಂಟುಮಾಡಿದೆ. ಕಳೆದ ವರ್ಷ ಬೇಸಿಗೆಯಲ್ಲಿ ಮುಂಬೈನಲ್ಲಿ ನೀರಿಗೆ ಹಾಹಾಕಾರವೆದ್ದಿತ್ತು.
ಮುಂಬೈ
Comments are closed.