ಮುಂಬೈ

ಜಾಕಿರ್ ನಾಯಕ್ ಫೌಂಡೇಶನ್ ನಿಂದ 800 ಅಧಿಕ ಜನರ ಮತಾಂತರ?

Pinterest LinkedIn Tumblr

dr-zakir-naikಮುಂಬೈ: ವಿವಾದಿತ ಇಸ್ಲಾಂ ಧಾರ್ವಿುಕ ಮುಖಂಡ ಹಾಗೂ ಪೀಸ್ ಟಿ.ವಿ ಮುಖ್ಯಸ್ಥ ಜಾಕಿರ್ ನಾಯಕ್ ಅವರ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ (ಐಆರ್ಎಫ್) ದೇಣಿಗೆ ಸಂಗ್ರಹಣೆಯ ಹೆಸರಿನಲ್ಲಿ ದೇಶಾದ್ಯಂತ 800ಕ್ಕೂ ಅಧಿಕ ಹಿಂದು ಹಾಗೂ ಕ್ರೈಸ್ತರನ್ನು ಇಸ್ಲಾಂ ಧರ್ಮಕ್ಕೆ ಮತಾಂತರಿಸಿದೆ ಎಂಬ ಆಘಾತಕಾರಿ ಅಂಶ ಬಹಿರಂಗವಾಗಿದೆ.

ಕಳೆದ ವಾರ ಮಹಾರಾಷ್ಟ್ರ ಭಯೋತ್ಪಾದಕ ನಿಗ್ರಹ ದಳ ಹಾಗೂ ಕೇರಳ ಪೊಲೀಸರ ಜಂಟಿ ಕಾರ್ಯಾಚರಣೆ ವೇಳೆ ಬಂಧಿಸಲ್ಪಟ್ಟಿದ್ದ ಐಆರ್ಎಫ್ ಸಂಘಟನೆಯ ಸಂಪರ್ಕಾಧಿಕಾರಿ ರಿಜ್ವಾನ್ ಖಾನ್ ನ ವಿಚಾರಣೆ ವೇಳೆ ಈ ಮಾಹಿತಿ ಹೊರಬಿದ್ದಿದೆ.

ಐಆರ್ಎಫ್ ಸಂಘಟನೆಗೆ ದೇಣಿಗೆ ಸಂಗ್ರಹಿಸಲು ವಿಶ್ವದಲ್ಲಿನ ಹಲವು ಶ್ರೀಮಂತ ವ್ಯಕ್ತಿಗಳಿಗೆ ಬಲೆ ಬೀಸುತ್ತಿದ್ದು, ಈಗಾಗಲೇ ಎಂಟುನೂರು ಜನರನ್ನು ಮತಾಂತರಕ್ಕೆ ಪ್ರೇರೇಪಿಸಿದೆ. ತಮ್ಮ ಕತ್ಯಗಳಿಗೆ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಲಾಗಿದ್ದು ಹೆಚ್ಚಾಗಿ ಟಾರ್ಗೆಟ್ ಮಾಡಿದ್ದು, ಕೇಲವರನ್ನು ಭಲವಂತವಾಗಿ ಮಂತಾಂತರ ಮಾಡಲಾಗುತ್ತಿದೆ ಎಂಬ ಮಾಹಿತಿಯನ್ನು ರಿಜ್ವಾನ್ ಪೊಲೀಸರಿಗೆ ತಿಳಿಸಿದ್ದಾನೆ.

ರಿಜ್ವಾನ್ ನ ಹೇಳಿಕೆ ಪೂರಕವಾಗುವಂತೆ ಆತನ ಮನೆಯಲ್ಲಿ ಹಲವು ದಾಖಲೆಗಳು ದೊರಕಿದ್ದು ಇವುಗಳನ್ನು ಈಗಾಗಲೇ ಎಟಿಎಸ್ ವಶಪಡಿಸಿಕೊಂಡಿದೆ. ಒಂದು ವೇಳೆ ರಿಜ್ವಾನ್ ಹೇಳಿಕೆಗಳು ನಿಜವಾದಲ್ಲಿ ಜಾಕಿರ್ ನಾಯಕ್ ವಿರುದ್ದವೂ ಪ್ರಕರಣ ದಾಖಲಾಗುವ ಸಂಭವವಿದೆ. ಈಗಾಗಲೇ ಐಪಿಸಿ ಸೆಕ್ಷನ್ 120 ಬಿ, 153 ಎ ಅನ್ವಯ (ಕ್ರಿಮಿನಲ್ ಪಿತೂರಿ) ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.

Comments are closed.