ಮುಂಬೈ

ಕೇವಲ ಪಿಯುಸಿ ಪಾಸ್ ಮಾಡಿ ಅಕೌಂಟೆಂಟ್ ಕೆಲ್ಸ ಗಿಟ್ಟಿಸಿಕೊಂಡ ಯುವತಿ ಮುಂದೆ ಕೋಟ್ಯಾಧೀಶಳಾದಳು ….ಏನು ಪಂಗನಾಮ ಹಾಕಿದಳು..ಇಲ್ಲಿದೆ ಫುಲ್ ಡಿಟೈಲ್ಸ್ …

Pinterest LinkedIn Tumblr

vrushaali

ಮುಂಬೈ: ಆಕೆ ಜಸ್ಟ್ ಪಿಯುಸಿ ಪಾಸ್, ಆದ್ರೆ ಆಕೆಗೆ ಅಕೌಂಟೆಂಟ್ ಕೆಲಸ ಸಿಕ್ಕಿತ್ತು. ಇದೀಗ ಆಕೆಗೆ 29 ವರ್ಷ ಆದ್ರೆ ಆಕೆ ಕೇವಲ 29 ವರ್ಷಕ್ಕೆ ಕಂಪನಿಯ ಅಕೌಂಟ್ ಕೊಳ್ಳೆಹೊಡೆದು 16 ಕೋಟಿ ರೂ. ಒಡತಿಯಾಗಿದ್ಲು. ಸಿಕ್ಕಿಬಿದ್ದ ಆಕೆಯ ಆಸ್ತಿ ವಿವರಣೆ ಬಿಚ್ಚಿಟ್ಟ ಅಧಿಕಾರಿಗಳು ಬೆಚ್ಚಿಬಿದ್ದಿದ್ದಾರೆ.

ಕೇವಲ ಪಿಯುಸಿ ಪಾಸ್ ಮಾಡಿ ವೃಷಾಲಿ ಬಮಾನೆ ಫೋರ್ಟ್‍ನಲ್ಲಿನ ಅಸಿಸ್ಟಂಟ್ ಅಕೌಂಟೆಂಟ್ ಆಗಿ ಕೆಲಸ ಗಿಟ್ಟಿಸಿಕೊಂಡಿದ್ದಳು. ಆದ್ರೆ ಮೊದ ಮೊದಲು ಕಂಪನಿಯ ವಿಶ್ವಾಸಗಳಿಸಿದ ಆಕೆ ಅಕೌಂಟೆಂಟ್‍ನಲ್ಲಿ ತಪ್ಪು ಲೆಕ್ಕ ಹಾಕಿ ತನ್ನ ಬ್ಯಾಂಕ್ ಅಕೌಂಟ್ ಮೊತ್ತವನ್ನ ಹೆಚ್ಚಿಸಿಕೊಂಡಿದ್ದಾಳೆ. ಅದು ಎಷ್ಟರ ಮಟ್ಟಿಗೆಯಂದ್ರೆ, ಕೇವಲ 18 ಸಾವಿರ ಸಂಬಳ ಪಡೆಯುತ್ತಿದ್ದ ಆಕೆ 6 ಮನೆ, 4 ಕಾರು ಲಕ್ಸುರಿ ವಾಚ್‍ಗಳಿಗೆ ಅಧಿಪತಿಯಾಗಿದ್ದಾಳೆ.

ಕಂಪನಿಗೆ ಪಂಗನಾಮ: ಕೋಟಿ ಕೋಟಿ ಬಾಚಿದ್ದ ಆಕೆ ಬರೋಬ್ಬರಿ 16.32 ಕೋಟಿ ರೂ. ಸಂಪಾದನೆ ಮಾಡಿದ್ದಳು. 2013ರಿಂದ ಚೋರ ಲೆಕ್ಕ ಮಾಡಿದ್ದ ಆಕೆ, ಪೋಷಕರು, ಗಂಡ, ಸಹೋದರರು, ಸಂಬಂಧಿಗಳ ಖಾತೆಗೆ ಹಣ ರವಾನಿಸಿದ್ದಳು. ಅಲ್ಲದೇ ಸತಾರಾ ಜಿಲ್ಲೆಯ ಕರಾಡದಲ್ಲಿ 7 ಕೊಠಡಿಗಳಿರುವ, ಸ್ವಿಮ್ಮಿಂಗ್ ಪೂಲ್ ಇರುವ 5 ಕೋಟಿ ರೂ. ಮೊತ್ತದ ಗೋಳೇಶ್ವರ್ ಬಂಗಲೆಯನ್ನ ಕಟ್ಟಿಸಿದ್ದಳು. ಅಲ್ಲದೇ ಡೊಂಬಿವಲಿಯಲ್ಲಿ ತಲಾ 60 ಲಕ್ಷ ಮೌಲ್ಯದ ಫ್ಲಾಟ್‍ಗಳನ್ನ ಖರೀದಿ ಮಾಡಿದ್ದಳು. ಇದಲ್ಲದೇ 4 ದುಬಾರಿ ಕಾರುಗಳು, ಹಾಗೂ ಐಷಾರಾಮಿ ಖರೀದಿಸಿ ಸಂಬಂಧಿಕರಿಗೆ ನೀಡಿದ್ದಳು. ವಿಶೇಷವೆಂದರೆ ಈ ಎಲ್ಲಾ ವಾಹನಗಳಿಗೆ ಬೇರೆ ಬೇರೆ ಆರ್‍ಟಿಓನಿಂದ 3777 ಎಂಬ ನಂಬರ್ ನೀಡಲಾಗಿತ್ತು. ಇಷ್ಟಲ್ಲದೇ ದುಬಾರಿ ವಾಚ್‍ಗಳು ಕೂಡ ಈಕೆಯ ಬಳಿ ಇದ್ದಿದ್ದಲ್ಲದೇ ಬರೋಬ್ಬರಿ 18 ಲಕ್ಷ ರೂ. ಮೌಲ್ಯದ ಚಿನ್ನ, ಬೆಳ್ಳಿ ಆಭರಣಗಳನ್ನ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ವೃಷಾಲಿ ಮಾಹಾಪ್ಲಾನ್: ಮನೆಯ ಒಳಾಂಗಣ ವಿನ್ಯಾಸಕ್ಕೆ ಪ್ರಾಮುಖ್ಯತೆ ನೀಡುತ್ತಿದ್ದ ಈಕೆ 6 ಮನೆಯ ವಿನ್ಯಾಸಕ್ಕೆ ದುಬಾರಿ ವೆಚ್ಚ ಮಾಡಿದ್ದಾಳೆ. ಸುಮಾರು 8 ವಿವಿಧ ಬ್ಯಾಂಕ್ ಖಾತೆಗಳನ್ನು ಹೊಂದಿದ್ದ ವೃಶಾಲಿ ಹೆಸರಿಗೆ ಮಾತ್ರ ಈ ಖಾತೆಗಳನ್ನ ಬಳಸುತ್ತಿದ್ದಳು. ಹೀಗಾಗಿ ಮುಂಬೈ ಪೊಲೀಸರಿಗೆ ಈಕೆಯ ಬ್ಯಾಂಕ್ ಖಾತೆಯಲ್ಲಿ ಹೆಚ್ಚಿನ ಮೊತ್ತದ ಹಣ ಲಭ್ಯವಾಗಿಲ್ಲ.

ಇದಲ್ಲದೇ ಮುಂಬೈನ ಥಾಣೆ, ಕೇರಳ, ರಾಜಸ್ಥಾನ ಹಲವು ರಾಜ್ಯಗಳಲ್ಲಿ ಈಕೆ ಆಸ್ತಿಯನ್ನ ಹೊಂದಿರುವ ಮಾಹಿತಿ ದೊರೆಕಿದ್ದು, ಅದರ ಬಗ್ಗೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಇದೀಗ ಈ ಮಾಹಾ ವಂಚಕಿ ವಿರುದ್ಧ ಸೆಕ್ಷನ್ 408(ವಂಚನೆ) ಕೇಸ್‍ನ್ನ ದಾಖಲಿಸಿ ಬಂಧಿಸಿದ್ದಾರೆ.

Comments are closed.