
ಕ್ಯಾಲಿಫೋರ್ನಿಯಾ: ಹೆಣ್ಣು ತನ್ನ ಮಗುವಿಗೆ ಜನ್ಮ ನೀಡುವ ಕ್ಷಣಗಳು ಆಕೆಯ ಬದುಕಿನಲ್ಲಿ ಅತ್ಯಂತ ಪ್ರಮುಖವಾದದ್ದು. ಡೆಲಿವರಿ ಆಗುವ ಸಮಯದಲ್ಲಿ ಹೆಣ್ಣು ಸಾಕಷ್ಟು ನೋವು ಅನುಭವಿಸುತ್ತಾಳೆ. ಅಷ್ಟೆಲ್ಲಾ ನೋವು ಅನುಭವಿಸಿ ಮಗುವಿಗೆ ಜನ್ಮ ನೀಡಿದ ನಂತರ ಆಕೆಗೆ ಮರುಜನ್ಮ ಸಿಕ್ಕಂತೆ ಆಗಿರುತ್ತದೆ. ಆದರೆ ಕ್ಯಾಲಿಫೋರ್ನಿಯಾ ಮೂಲದ ಮಹಿಳೆಯೊಬ್ಬರು ಪ್ರಸವ ವೇದನೆಯ ನಡಯವೆಯೂ ತನ್ನ ಮಗು ಜನಿಸುವುದನ್ನು ಫೋಟೋದಲ್ಲಿ ಸೆರೆಹಿಡಿದಿದ್ದಾರೆ.




ವೃತ್ತಿಯಲ್ಲಿ ವೆಡ್ಡಿಂಗ್ ಫೋಟೋಗ್ರಾಫರ್ ಆಗಿರುವ ಲೀಸಾ ರಾಬಿನ್‍ಸನ್ ತನ್ನ ಮಗುವಿಗೆ ಜನ್ಮ ನೀಡಿದ ಆ ಸುಂದರ ಕ್ಷಣಗಳನ್ನ ಫೋಟೋದಲ್ಲಿ ಸೆರೆಹಿಡಿದಿದ್ದಾರೆ. ಈಕೆ ಗರ್ಭಿಣಿಯಾಗಿರುವಾಗಲೇ ಮಗುವಿನ ಜನನದ ಆ ಕ್ಷಣಗಳನ್ನ ಸೆರೆಹಿಡಿಯಬೇಕು ಅಂತ ಅಂದುಕೊಂಡಿದ್ದರು. ಲೇಬರ್ ವಾರ್ಡ್‍ನಲ್ಲಿ ಲೀಸಾ ಮಗುವಿಗೆ ಜನ್ಮ ನೀಡುತ್ತಲೇ ಫೋಟೋ ತೆಗೆದಿದ್ದು, ಮತ್ತಷ್ಟು ಫೋಟೋಗಳನ್ನ ಆಕೆಯ ತಾಯಿ ಸೆರೆಹಿಡಿದಿದ್ದಾರೆ.
ನಾನು ಲೇಬರ್ ವಾರ್ಡ್‍ಗೆ(ಡೆಲಿವರಿ ನಡೆಸುವ ಕೊಠಡಿ) ಕ್ಯಾಮೆರಾ ತೆಗೆದುಕೊಂಡು ಹೋಗಬಹುದೋ ಇಲ್ಲವೋ ನನಗೆ ಗೊತ್ತಿರಲಿಲ್ಲ. ಆದ್ರೆ ಇದನ್ನ ಮಾಡೇ ತೀರಬೇಕೆಂದು ನಿರ್ಧರಿಸಿದ್ದೆ. ನನಗೆ ಪ್ರಸವ ವೇದನೆ ಕಾಣಿಸಿಕೊಂಡಾಗ ಬಟ್ಟೆಬರೆಯ ಜೊತೆಗೆ ಕ್ಯಾಮೆರಾವನ್ನು ತೆಗೆದುಕೊಂಡು ಆಸ್ಪತ್ರೆಗೆ ಹೊರೆಟೆವು. ಆ ನೋವಿನ ನಡುವೆ ಕ್ಯಾಮೆರಾ ಹಿಡಿಯುವ ಶಕ್ತಿಯೂ ನನ್ನಲ್ಲಿರುತ್ತದೆಯೋ ಇಲ್ಲವೋ ಎಂದುಕೊಂಡಿದ್ದೆ. ನನ್ನ ಮಗುವಿಗೆ ಜನ್ಮ ನೀಡುವುದರ ಫೋಟೋ ತೆಗೆಯಬಹುದಾ ಎಂದು ವೈದ್ಯರನ್ನ ಕೇಳಿದೆ. ಅವರಿಗೆ ಯಾವುದೇ ಅಭ್ಯಂತರವಿರಲಿಲ್ಲ. ಆದ್ರೆ ನಾನು ಲೇಬರ್ ವಾರ್ಡ್‍ಗೆ ಕ್ಯಾಮೆರಾ ತಂದಿದ್ದನ್ನು ನೋಡಿ ಅವರು ಒಂದು ಕ್ಷಣ ಅಚ್ಚರಿಪಟ್ಟಿದ್ರು. ನನಗೆ ಅನಸ್ತೇಶಿಯಾ ಕೊಟ್ಟ ನಂತರ ಕ್ಯಾಮೆರಾವನ್ನ ಮುಖದ ಹತ್ತಿರ ಹಿಡಿದು ಮಲಗಿದೆ. ನಾನು ಯಾವ ರೀತಿ ಫೋಟೋ ತೆಗೆಯುತ್ತಿದ್ದೇನೆ ಅಂತ ಗೊತ್ತಾಗುತ್ತಿರಲಿಲ್ಲ. ನನಗೆ ಫೋಕಸ್ ಮಾಡಲು ಆಗುತ್ತಾ ಅಂತ ಯೋಚಿಸಿದ್ದೆ. ಫೋಟೋ ತೆಗೆಯುತ್ತಾ ಈ ಅನುಭವವನ್ನ ನಾನು ಮಿಸ್ ಮಾಡಿಕೊಳ್ಳಲಿಲ್ಲ. ನನ್ನ ಮಗುವಿಗೆ ಜನ್ಮ ನೀಡುವ ಪ್ರತಿ ಕ್ಷಣವನ್ನೂ ನಾನು ಅನುಭವಿಸುತ್ತಿದೆ. ಅಂತೂ ನಾನು ಮಗು ಹೊರಬಂದ ಕ್ಷಣವನ್ನ ಸೆರೆಹಿಡಿದಿದ್ದೆ. ನನ್ನ ಗಂಡನ ಮುಖವನ್ನ ನೋಡಿದೆ. ಅವರು ಸಂತೋಷದಿಂದ ಕಣ್ಣು ತುಂಬಿಕೊಂಡಿದ್ದರು. ಈಗ ಈ ಎಲ್ಲಾ ಫೋಟೋಗಳನ್ನ ನೋಡಿದ್ರೆ ಆ ಕ್ಷಣಗಳು ಇನ್ನೂ ಕಣ್ಣಿಗೆ ಕಟ್ಟಿದಂತೆ ಇವೆ ಅಂತ ಲೀಸಾ ವಿವರಿಸುತ್ತಾರೆ. ಅಂದಹಾಗೆ ಲೀಸಾಗೆ ಮದ್ದಾದ ಹೆಣ್ಣು ಮಗು ಜನಿಸಿದ್ದು ಅನೋರಾ ಅಂತ ಹೆಸರಿಟ್ಟಿದ್ದಾರೆ.
Comments are closed.