ಮನೋರಂಜನೆ

ದೀಪಿಕಾ ಪಡುಕೋಣೆ ಬಹು ದೊಡ್ಡ ನಟಿ- ಇರ್ಫಾನ್ ಖಾನ್

Pinterest LinkedIn Tumblr

irfaಮುಂಬೈ: ತನಗೆ ಯಾವುದೇ ರೀತಿಯ ಪಾತ್ರ ನೀಡಿದ್ರೂ ಸರಿ ಅದಕ್ಕೆ ಅದ್ಭುತವಾಗಿ ಜೀವ ತುಂಬಬಲ್ಲ ನಟಿ ದೀಪಿಕಾ ಪಡುಕೋಣೆ. ಬಾಲಿವುಡ್ ಅಂಗಳಕ್ಕ ಕಾಲಿಟ್ಟ ಕೆಲವೇ ವರ್ಷದಲ್ಲಿ ದಿಪ್ಪಿ ಉತ್ತಮ ಅವಕಾಶಗಳನ್ನು ಪಡೆದುಕೊಂಡ್ರು.ಅಲ್ಲದೇ ಆ ಎಲ್ಲಾ ಅವಕಾಶಗಳನ್ನು ಅವರು ಸಮರ್ಥವಾಗಿ ಬಳಸಿಕೊಂಡು ಇದೀಗ ಹಾಲಿವುಡ್ ಸಿನಿಮಾದವರೆಗೆ ಬೆಳೆದು ನಿಂತಿದ್ದಾರೆ. ದೀಪಿಕಾ ಅವರ ಈ ಸಾಧನೆಯನ್ನು ನೋಡಿ ನಟ ಇರ್ಫಾನ್ ಖಾನ್ ಅವರು ಅವರನ್ನು ಹಾಡಿಹೊಗಳಿದ್ದಾರೆ.

ನಟ ಇರ್ಫಾನ್ ಖಾನ್ ಅವರು ಪೀಕು ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ಅವರೊಂದಿಗೆ ಅಭಿನಯಿಸಿದ್ದರು.ಸಿನಿಮಾದಲ್ಲಿ ಅಮಿತಾಬ್ ಬಚ್ಚನ್ ಅವರು ಕೂಡ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು.ಆದ್ರೆ ಕೇವಲ ಒಂದೇ ಸಿನಿಮಾದಲ್ಲಿ ದಿಪ್ಪಿ ಅವರ ಜೊತೆ ಅಭಿನಯಿಸಿದ್ದರೂ ದೀಪಿಕಾ ಅವರೊಬ್ಬ ಉತ್ತಮ ನಟಿ ಅನ್ನೋದು ನನಗೆ ಅರ್ಥವಾಯ್ತು ಅಂತಾ ಇರ್ಫಾನ್ ಖಾನ್ ಅವರು ಹೇಳಿದ್ದಾರೆ.

ಇನ್ನೊಂದು ವಿಚಾರ ಅಂದ್ರೆ ಅಮಿತಾಬ್ ಬಚ್ಚನ್ ಅವರು ಕೂಡ ದೀಪಿಕಾ ಅವರನ್ನು ಹಾಗೇ ಹೊಗಳಿದ್ದಾರೆ. ನಾನು ಪೀಕು ಸಿನಿಮಾವನ್ನು ನೋಡದಕ್ಕೆ ಪ್ರಮುಖ ಕಾರಮ ದೀಪಿಕಾ ಅಂತಾ ಅವರು ಹೇಳಿದ್ದಾರೆ.

ದೀಪಿಕಾ ಅವರು ನಟ ನಟಿಯರಲ್ಲಿ ವಜ್ರವಿದ್ದಂತೆ.ಅವರು ಯಾವಾಗಲೂ ಹೊಳೆಯುತ್ತಲೇ ಇರುತ್ತಾರೆ.ಅವರ ಜೊತೆ ನಾನು ಕೆಲಸ ಮಾಡಿದ್ದೇನೆ ಅಂತಾ ಹೇಳಿಕೊಳ್ಳೋದಕ್ಕೆ ನನಗೆ ತುಂಬಾನೇ ಹೆಮ್ಮೆಯಾಗುತ್ತೆ.ಅವರೊಬ್ಬ ಸರಿಸಾಟಿಯಿಲ್ಲದ ನಟಿ ಅಂತಾ ಇರ್ಫಾನ್ ಖಾನ್ ಅವರು ದೀಪಿಕಾಪಡುಕೋಣೆ ಅವರನ್ನು ಹಾಡಿ ಹೊಗಳಿದ್ದಾರೆ.

Comments are closed.