ರಾಷ್ಟ್ರೀಯ

ಮುಂಗಾರು ತಾತ್ಕಾಲಿಕ ದುರ್ಬಲ; ಮತ್ತೆ ಜೂನ್ 15ಕ್ಕೆ ಪ್ರಬಲ: ಹವಾಮಾನ ಇಲಾಖೆ

Pinterest LinkedIn Tumblr

monsoon-indiaನವದೆಹಲಿ: ಕಳೆದ ವಾರವಷ್ಟೇ ಕೇರಳ ಪ್ರವೇಶಿಸಿ ಕರಾವಳಿ ತೀರದಾದ್ಯಂತ ಭಾರಿ ಮಳೆ ಸುರಿಸಿದ್ದ ಮುಂಗಾರು ಮಾರುತಗಳು ಈಗ ತಾತ್ಕಾಲಿಕವಾಗಿ ದುರ್ಬಲಗೊಂಡಿವೆ ಎಂದು ಕೇಂದ್ರ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಪ್ರಸ್ತುತ ಉತ್ತರ ಕರ್ನಾಟಕದ ಕೊಂಕಣ ಕರಾವಳಿ ತೀರದಲ್ಲಿ ಬೀಸುತ್ತಿರುವ ಮಾನ್ಸೂನ್ ಮಾರುತಗಳ ಅಬ್ಬರ ಕಡಿಮೆಯಾಗಿದ್ದು, ಈ ಭಾಗದ ಪ್ರದೇಶಗಳಲ್ಲಿ ಒಂದೆರಡು ದಿನಗಳ ಕಾಲ ಮಳೆ ಅಬ್ಬರ ತಗ್ಗಲಿದೆ ಎಂದು ಕೇಂದ್ರ ಹವಾಮಾನ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ಈ ಹಿನ್ನಲೆಯಲ್ಲಿ ಈಗಾಗಲೇ ಮಹಾರಾಷ್ಟ್ರ ಪ್ರವೇಶಿಸಬೇಕಿದ್ದ ಮಾನ್ಸೂನ್ ಮಾರುತಗಳು 5ರಿಂದ 6 ದಿನಗಳ ತಡವಾಗಿ ರಾಜ್ಯ ಪ್ರವೇಶ ಮಾಡಲಿವೆ. ಈಗಾಗಲೇ ಸತತ ಭೀಕರ ಬರದಿಂದಾಗಿ ತತ್ತರಿಸಿ ಹೋಗಿರುವ ಮಹಾರಾಷ್ಟ್ರದ ಜನತೆ ಉತ್ತಮ ಮಳೆ ನಿರೀಕ್ಷೆಯಲ್ಲಿದ್ದು, ಹವಾಮಾನ ಇಲಾಖೆಯ ಈ ಸುದ್ದಿ ಇದೀಗ ಜನತೆಯ ನಿರಾಸೆಗೆ ಕಾರಣವಾಗಿದೆ.
ಜೂನ್ 10ರಂದೇ ಉತ್ತರ ಕರ್ನಾಟಕದ ಕೊಂಕಣ ಕರಾವಳಿ ತಲುಪಿದ್ದ ಮಾನ್ಸೂನ್ ಮಾರುತಗಳು ಇನ್ನೂ ಗೋವಾ ಮತ್ತು ಮಹಾರಾಷ್ಟ್ರ ಕರಾವಳಿ ತೀರವನ್ನೇ ತಲುಪಿಲ್ಲ. ಆದರೂ ಈ ಪ್ರದೇಶಗಳಲ್ಲಿ ಈಗಾಗಲೇ ತುಂತುರು ಮಳೆಯಾಗುತ್ತಿದ್ದು, ಜೂನ್ 15ಕ್ಕೆ ಮತ್ತೆ ಮುಂಗಾರು ಮಾರುತಗಳ ಸಾಮರ್ಥ್ಯ ಹೆಚ್ಚಾಗಲಿದೆ. ಆಗ ಈ ಭಾಗದ ಪ್ರದೇಶಗಳಲ್ಲಿ ಭಾರಿ ಮಳೆಯಾಗುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Comments are closed.