ಮನೋರಂಜನೆ

ಮುಂಬಯಿಯಲ್ಲಿ 5 ಕೋಟಿ ರೂ. ಬೆಲೆಯ ಬಂಗ್ಲೆ ಖರೀದಿಸಿದ ರೋಹಿತ್ ಶರ್ಮಾ

Pinterest LinkedIn Tumblr

Rohit-Sharma

ಮುಂಬೈ: ಮುಂಬೈ ಇಂಡಿಯನ್ಸ್ ಟೀಂ ನಾಯಕ ರೋಹಿತ್ ಶರ್ಮಾ ಮುಂಬೈನ ಖಂಡಾಲಾದಲ್ಲಿ ವಿಲ್ಲಾವೊಂದನ್ನು 5 ಕೋಟಿ ರೂ.ಗೆ ಖರೀದಿಸಿದ್ದಾರೆ.ನಟ ಸುನೀಲ್ ಶೆಟ್ಟಿ ಕಂಪನಿ ಮಾಲೀಕತ್ವದ ಡಿಸ್ಕವರಿ ಎಂಬ ಹೆಸರಿನ ವಸತಿ ಯೋಜನೆಯಲ್ಲಿ ಶರ್ಮಾ ಕೆಲವು ಸಮಯದ ಹಿಂದೆ ಬಂಗ್ಲೆ ಖರೀದಿಸಿದ್ದಾರೆ.

ಬಂಗ್ಲೆಯ ಒಟ್ಟು ವಿಸ್ತೀರ್ಣ 7500 ಚದರ ಅಡಿಗಳಾಗಿದ್ದು ಪ್ರಸಕ್ತ ನಿರ್ಮಾಣ ಹಂತದಲ್ಲಿದೆ. ಇದು 5 ಬಿಎಚ್‌ಕೆ ವಿಲ್ಲಾ ಆಗಿದ್ದು, ಲಾನ್ ಮತ್ತು ಹಾಗೂ ಪ್ರತ್ಯೇಕ ಈಜುಕೊಳ ಹೊಂದಿದೆ. ನಿವೇಶನದ ಒಟ್ಟು ವಿಸ್ತೀರ್ಣ 10,000 ಚದರ ಅಡಿ ಇದೆ.

ಸುನೀಲ್ ಶೆಟ್ಟಿ ಖಂಡಾಲಾದಲ್ಲಿ ಡಿಸ್ಕವರಿ ಎಂಬ ಹೆಸರಿನ ಭಾರೀ ಪ್ರಾಜೆಕ್ಟ್ ಹೊಂದಿದ್ದು, ಏಳು ಎಕರೆಯಲ್ಲಿ 21 ಬಂಗ್ಲೆಗಳಿಂದ ಕೂಡಿದೆ. ಪ್ರತಿಯೊಂದು ವಿಲ್ಲಾ ಖಾಸಗಿ ಟೆರೇಸ್ ಹೊಂದಿದ್ದು, ಎಸ್2 ರಿಯಾಲಿಟಿಗೆ ಈ ಯೋಜನೆ ಸೇರಿದ್ದು, ಸುನೀಲ್, ಅವರ ಪತ್ನಿ ಮಾನಾ ಮತ್ತಿತರರು ಮಾಲೀಕರಾಗಿದ್ದಾರೆ.

Comments are closed.