ಮುಂಬೈ

ಚೋಟಾ ರಾಜನ್ ಭಂಟರಿಂದ ವ್ಯಾಪಾರಿ ಅಪಹರಣ, ದರೋಡೆ

Pinterest LinkedIn Tumblr

chota

ಮುಂಬೈ: ಹಿರಿಯ ವ್ಯಾಪಾರಿಯೊಬ್ಬರನ್ನು ಅಪಹರಿಸಿ ಕರೆದೊಯ್ದ ಬಂಧಿತ ಪಾತಕಿ ಚೋಟಾ ರಾಜನ್ ಸಹಚರರು ಅವರಿಂದ 3 ಲಕ್ಷ ರೂ. ನಗದು, ಮೊಬೈಲ್ ಹಾಗೂ ಇತರ ಬೆಲೆಬಾಳುವ ವಸ್ತುಗಳನ್ನು ದೋಚಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ದಾದರ್ ಬಳಿ ಶುಕ್ರವಾರ ಟ್ಯಾಕ್ಸಿಯಲ್ಲಿ ಬಂದ ಇಬ್ಬರು ಶಸ್ತ್ರಧಾರಿಗಳು, ವ್ಯಾಪಾರಿಯನ್ನು ಮುಲುಂದ್ ಚೆಕ್‌ಪೋಸ್ಟ್ ಹತ್ತಿರಕ್ಕೆ ಕರೆದೊಯ್ದು ದೋಚಿದ್ದಾರೆ. ವ್ಯಾಪಾರಿ 73 ವರ್ಷದ ಅಶೋಕ್ ಜನ್ನೂದಾಸ್ ಭಾಟಿಯಾ ಶುಕ್ರವಾರ ದಾವರ್‌ನಲ್ಲಿ ಬಸ್‌ಗಾಗಿ ಕಾಯುತ್ತಿದ್ದಾಗ ಅಲ್ಲಿಗೆ ಟ್ಯಾಕ್ಸಿಯಲ್ಲಿ ಬಂದ ದುಷ್ಕರ್ಮಿಗಳು ರಾತ್ರಿ 8 ಗಂಟೆ ಸುಮಾರಿನಲ್ಲಿ ಮನೆಗೆ ಡ್ರಾಪ್ ಕೊಡುವುದಾಗಿ ಹತ್ತಿಸಿಕೊಂಡು ಕರೆದೊಯ್ದು ಈ ಕೃತ್ಯ ನಡೆಸಿದ್ದಾರೆ.

ಮೊದಲು ವ್ಯಾಪಾರಿ ಟ್ಯಾಕ್ಸಿಯಲ್ಲಿ ಹತ್ತಲು ನಿರಾಕರಿಸಿದ್ದಾರೆ. ಆಗ ಇಬ್ಬರೂ ಕೆಳಗಿಳಿದು, ರೈಫಲ್ ತೋರಿಸಿ ಅವರನ್ನು ಎತ್ತಿ ಟ್ಯಾಕ್ಸಿಯಲ್ಲಿ ಹಾಕಿಕೊಂಡು ಹೋಗಿದ್ದಾರೆ. ಭಾಟಿಯಾರನ್ನು ಮುಯಿಂದ್ ಚೆಕ್‌ಪೋಸ್ಟ್ ಬಳಿ ದೋಚಿ ನಂತರ ಎಲ್‌ಬಿಎಸ್ ಮಾರ್ಗದ ಬಳಿ ಬಂದು ಟ್ಯಾಕ್ಸಿ ಚಾಲಕನಿಗೆ 500ರೂ. ನೀಡಿ ಭಾಟಿಯಾರನ್ನು ಅವರ ಮನೆಗೆ ಬಿಡುವಂತೆ ಹೇಳಿ ಹೊಗಿದ್ದಾರೆ. ಇದಾದ ಬಳಿ ಮಾತುಂಗ ಠಾಣೆಗೆ ಹೋಗಿ ಭಾಟಿಯಾ ದೂರು ನೀಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

Write A Comment