ಕರ್ನಾಟಕ

ಮೈಸೂರು : ಬಿರುಕು ಬಿಟ್ಟ ನಾಲ್ವಡಿ ಕೃಷ್ಣರಾಜ ಒಡೆಯರ್ ಶಿಲಾಪ್ರತಿಮೆ

Pinterest LinkedIn Tumblr

odeyar

ಮೈಸೂರು: ನಗರದ ಹೃದಯ ಭಾಗದಲ್ಲಿರುವ ಮೈಸೂರು ಸಂಸ್ಥಾನದ ಪ್ರಮುಖ ಹಾಗೂ ಜನಪ್ರಿಯರಾಗಿದ್ದ ರಾಜಶ್ರೀ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಮೃತ ಶಿಲಾ ಪ್ರತಿಮೆ ಬಿರುಕುಬಿಟ್ಟಿದೆ. ಪ್ರತಿಮೆಯ ಪೇಟಾ, ಕಣ್ಣಿನ ಭಾಗ ಹಾಗೂ ತಲೆ ಭಾಗದಲ್ಲಿ ವೃತ್ತಾಕಾರದಲ್ಲಿ ಬಿರುಕು ಮೂಡಿರುವುದರಿಂದ ಪ್ರತಿಮೆ ವಿರೂಪಗೊಳ್ಳುವ ಆತಂಕ ಹುಟ್ಟಿಸಿದೆ. ಕತ್ತಿಯ ಮಧ್ಯಭಾಗದಲ್ಲೂ ಬಿರುಕು ಕಾಣಿಸಿಕೊಂಡಿದೆ. ಮೈಸೂರು ಸಂಸ್ಥಾನದ ಪ್ರಮುಖರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಅಮೃತ ಶಿಲಾಪ್ರತಿಮೆಯನ್ನು ನಗರದ ಪ್ರಮುಖ ಸ್ಥಳವಾದ ಕೆ.ಆರ್.ವೃತ್ತದಲ್ಲಿ ಪ್ರತಿಷ್ಠಾಪಿಸಲಾಗಿತ್ತು. ನಗರದ ಪ್ರಮುಖ ಆಕರ್ಷಣೆಗಳಲ್ಲಿ ಇದೂ ಒಂದೆನಿಸಿತ್ತು.

1952ರ ಅಕ್ಟೋಬರ್ 16 ರಂದು ಕಲಾವಿದ ಆರ್.ಪಿ.ಕಾಮತ್ ಅಮೃತಶಿಲೆಯಲ್ಲಿ ಪ್ರತಿಮೆ ಕೆತ್ತಿದ್ದರು. ಆ ವೇಳೆ ದಿವಾನರಾಗಿದ್ದ ಸರ್.ಎಂ.ವಿಶ್ವೇಶ್ವರಯ್ಯನವರು ಈ ಪ್ರತಿಮೆ ಅನಾವರಣಗೊಳಿಸಿದ್ದರು. ಪ್ರತಿಮೆಯಲ್ಲಿ ಬಿರುಕು ಕಾಣಿಸಿಕೊಂಡಿರುವುದರಿಂದ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎಂಬ ಬಗ್ಗೆ ಆತಂಕ ಉಂಟಾಗಿದೆ.

Write A Comment