ಮನೋರಂಜನೆ

70 ಕೋಟಿ ರೂ ಭೂಮಿಯನ್ನು 1.75 ಲಕ್ಷಕ್ಕೆ ಹೇಮಾಮಾಲಿನಿ ನೃತ್ಯ ಆಕಾಡೆಮಿಗೆ ನೀಡಿದ ಮಹಾರಾಷ್ಟ್ರ ಸರ್ಕಾರ

Pinterest LinkedIn Tumblr

hemamalini

ಮುಂಬೈ: ಬಿಜೆಪಿ ಸಂಸದೆ ಹೇಮಾಮಾಲಿನಿ ನೃತ್ಯ ಅಕಾಡೆಮಿಗಾಗಿ 70 ಕೋಟಿ ರೂ ಮೌಲ್ಯದ ಭೂಮಿಯನ್ನು ಕೇವಲ 1.75 ಲಕ್ಷ ರೂಪಾಯಿಗಳಿಗೆ ಮಹಾರಾಷ್ಟ್ರ ಸರ್ಕಾರ ನೀಡಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ.

ಆರ್‌ಟಿಐ ಕಾರ್ಯಕರ್ತ ಅನಿಲ್ ಗಲಗಲಿ ಮಾಹಿತಿಯನ್ನು ಬಹಿರಂಗಪಡಿಸಿದ್ದು, ಒಶಿವಾರಾದಲ್ಲಿ 2000 ಚದುರ ಅಡಿಯ ಭೂಮಿಯನ್ನು ಪ್ರತಿ ಚದುರ ಅಡಿಗೆ 87.50 ರೂಪಾಯಿಗಳ ದರ ನಿಗದಿಪಡಿಸಿ ಮಹಾರಾಷ್ಟ್ರ ಸರ್ಕಾರ ಬಿಜೆಪಿ ಸಂಸದೆ ಹೇಮಾಮಾಲಿನಿಗೆ ನೀಡಿರುವುದಾಗಿ ಜಿಲ್ಲಾಧಿಕಾರಿ ಕಚೇರಿಯ ದಾಖಲೆಗಳು ಬಹಿರಂಗಪಡಿಸಿವೆ ಎಂದು ತಿಳಿಸಿದ್ದಾರೆ.

ಗಲಗಲಿ ಆರ್‌ಟಿಐ ಮೂಲಕ ಹೇಮಾಮಾಲಿನಿಗೆ ನೀಡಿರುವ ಭೂಮಿಯ ಬಗ್ಗೆ ಮಾಹಿತಿ ಪಡೆಯಲು ಅರ್ಜಿ ಸಲ್ಲಿಸಿದಾಗ ಮಹಾರಾಷ್ಟ್ರ ಸರಕಾರ ಪ್ರತಿ ಚದುರ ಅಡಿಗೆ 35 ರೂಪಾಯಿಗಳಂತೆ ಭೂಮಿಯನ್ನು ನೀಡಲಾಗಿದೆ ಎಂದು ತಿಳಿಸಿತ್ತು. ವಿವಾದ ಭುಗಿಲೆದ್ದ ನಂತರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ತನಿಖೆಗೆ ಆದೇಶಿಸಿದ್ದರು.

ಬಿಜೆಪಿ ಸಂಸದೆ ಹೇಮಾಮಾಲಿನಿ ನೃತ್ಯ ಅಕಾಡೆಮಿ ಸ್ಥಾಪನೆಗಾಗಿ ಮಹಾರಾಷ್ಟ್ರ ಸರ್ರಾಕಾರಕ್ಕೆ ಈಗಾಗಲೇ 10 ಲಕ್ಷ ರೂಪಾಯಿ ಮುಂಗಡ ಹಣವನ್ನು ಪಾವತಿಸಿದ್ದು, ಸರ್ಕಾರವೇ ಅವರಿಗೆ 8.25 ಲಕ್ಷ ರೂಪಾಯಿ ಹಿಂಬಾಕಿ ಪಾವತಿಸಬೇಕಾಗಿದೆ ಎಂದು ತನಿಕಾ ತಂಡ ತಿಳಿಸಿದೆ.

Write A Comment