ರಾಷ್ಟ್ರೀಯ

ವಿಜಯ್ ಮಲ್ಯ ಪಾಸ್ ಪೋರ್ಟ್ ರದ್ದು: ವಿದೇಶಾಂಗ ಇಲಾಖೆ

Pinterest LinkedIn Tumblr

vijay-mallya

ನವದೆಹಲಿ: ಸಾಲಬಾಧೆಯಿಂದ ವಿದೇಶಕ್ಕೆ ಪರಾರಿಯಾಗಿರುವ ಸಾಲದ ದೊರೆ ವಿಜಯ್ ಮಲ್ಯರ ಪಾಸ್ ಪೋರ್ಟ್ ಅನ್ನು ವಿದೇಶಾಂಗ ವ್ಯವಹಾರಗಳ ಸಚಿವಾಲಯ ರದ್ದು ಗೊಳಿಸಿದೆ.

ಬ್ಯಾಂಕುಗಳಿಗೆ 9400 ಕೋಟಿ ರುಪಾಯಿ ಸಾಲ ತೀರಿಸದೆ ಉದ್ದೇಶಪೂರಿತ ಸುಸ್ತಿದಾರನಾಗಿ ದೇಶ ತೊರೆದಿರುವ ಮಲ್ಯ ಸದ್ಯ ಲಂಡನ್ ನಲ್ಲಿ ವಾಸವಾಗಿದ್ದಾರೆ. ಜಾರಿ ನಿರ್ದೇಶನಾಲಯ ಹೊರಡಿಸಿರುವ ಶೋಕಾಸ್ ನೋಟಿಸ್ ಮತ್ತು ಮುಂಬೈ ಕೋರ್ಟ್ ಹೊರಡಿಸಿರುವ ಜಾಮೀನು ರಹಿತ ಬಂಧನ ವಾರೆಂಟ್​ಗೆ ವಿಜಯ್ ಮಲ್ಯ ಪ್ರತಿಕ್ರಿಯೆ ನೀಡಿಲ್ಲ.

ಪಾಸ್​ಪೋರ್ಟ್ ಕಾಯ್ದೆ, 1967ರ ಸೆಕ್ಷನ್ 10 (3) (ಸಿ) ಮತ್ತು ಸೆಕ್ಷನ್ 10 (3) (ಎಚ್) ಅನ್ವಯ ವಿಜಯ್ ಮಲ್ಯ ಪಾಸ್​ಪೋರ್ಟ್​ನ್ನು ರದ್ದುಪಡಿಸಲಾಗಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ.

ಇನ್ನು ಗುರುವಾರ ಲಂಡನ್ ನಲ್ಲಿರುವ ವಿಜಯ್ ಮಲ್ಯ ಅವರನ್ನು ಗಡಿಪಾರು ಮಾಡಲು ಕಾನೂನು ಪ್ರಕ್ರಿಯೆ ಆರಂಭಿಸುವಂತೆ ಜಾರಿ ನಿರ್ದೇಶನಾಲಯ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿದ್ದು, ಗಡಿಪಾರು ಮನವಿಯನ್ನು ಪರಿಗಣಿಸಾಲಗುವುದು ಎಂದು ವಿದೇಶಾಂಗ ಸಚಿವಾಲಯದ ಹೇಳಿತ್ತು.

ಮಲ್ಯ ಅವರ ವಿರುದ್ಧ ಕೋರ್ಟ್ ಬಂಧನ ವಾರಂಟ್ ಜಾರಿ ಮಾಡಿದ್ದು, ಅವರನ್ನು ಆ ದೇಶದಿಂದ ಗಡಿಪಾರು ಮಾಡಲು ಕ್ರಮಕೈಗೊಳ್ಳುವಂತೆ ಜಾರಿ ನಿರ್ದೇಶನಾಲಯ(ಇಡಿ) ಗುರುವಾರ ವಿದೇಶಾಂಗ ಸಚಿವಾಲಯಕ್ಕೆ ಮನವಿ ಮಾಡಿತ್ತು.

Write A Comment