ಮುಂಬೈ

ಶನಿಸಿಂಗಣಾಪುರ ನಂತರ ದರ್ಗಾಕ್ಕೆ ಮುತ್ತಿಗೆ ಹಾಕಲು ಭೂಮಾತಾ ಬ್ರಿಗೇಡ್ ನಿರ್ಧಾರ

Pinterest LinkedIn Tumblr

Trupti-7ಮುಂಬೈ: ಮಹಾರಾಷ್ಟ್ರದ ಶನಿಸಿಂಗಣಾಪುರ ದೇವಾಲಯದ ಗರ್ಭಗುಡಿಗೆ ಮಹಿಳೆಯರ ಪ್ರವೇಶದ ವಿಚಾರವಾಗಿ ಯಶಸ್ವಿ ಹೋರಾಟ ನಡೆಸಿದ ಭೂಮಾತಾ ಬ್ರಿಗೇಡ್ ತಂಡ, ಈಗ ಎಪ್ರಿಲ್ 28ರಂದು ಮುಂಬೈನ ಹಜಿ ಅಲಿ ದರ್ಗಾಕ್ಕೆ ಮಸ್ಲೀಂ ಮಹಿಳೆಯರ ಪ್ರವೇಶದ ಕುರಿತು ಶಾಂತಿಯುತ ಪ್ರತಿಭಟನೆ ನಡೆಸಲಾಗುವುದು ಎಂದು ಭೂಮಾತಾ ಬ್ರಿಗೇಡ್ ಅಧ್ಯಕ್ಷೆ ತೃಪ್ತಿ ದೇಸಾಯಿ ಹೇಳಿದ್ದಾರೆ.
ಅಹಮದಾಬಾದ್ ನ ಶನಿಸಿಂಗಣಾಪುರ, ನಾಸಿಕ್ ನ ತ್ರಿಯಂಬಕೇಶ್ವರ ಶಿವ ದೇವಾಲಯಗಳ ಗರ್ಭಗುಡಿಗೆ ಮಹಿಳೆಯರ ಪ್ರವೇಶದ ಕುರಿತು ಪ್ರತಿಭಟನೆ ನಡೆಸಿ ಯಶಸ್ವಿಯಾದ ಬಳಿಕ ಸುಮಾರು 20ಕ್ಕೂ ಅಧಿಕ ಎನ್ ಜಿಒ ಹಾಗೂ ಮಾನವ ಹಕ್ಕು ಹೋರಾಟಗಾರರು “ಹಾಜೀ ಅಲಿ ಸಬ್ ಕೇಲಿಯೇ” ಎಂಬ ಹೆಸರಿನಡಿಯಲ್ಲಿ ಮುಂಬೈನ ಹಜಿ ಅಲಿ ದರ್ಗಾಕ್ಕೆ ಮಹಿಳೆಯರ ಪ್ರವೇಶ ಕೋರಿ ಶಾಂತಿಯುತ ಪ್ರತಭಟನೆ ನಡೆಸಲಿದ್ದಾರೆ ಎಂದು ಘೋಷಿಸಿದ್ದಾರೆ.
ಅರಬ್ಬಿ ಸಮುದ್ರದ ಬಳಿಯಿರುವ 15ನೇ ಶತಮಾನದ ಈ ಸೂಫೀ ದರ್ಗಾಕ್ಕೆ ಮಹಿಳೆಯರ ಭೇಟಿ ಹಿಂದಿನಿಂದಲೂ ನಿಷೇಧಿಸಲಾಗಿದೆ. ಪ್ರತಿನಿತ್ಯ ನೂರಾರು ಮಂದಿ ಈ ದರ್ಗಾಕ್ಕೆ ಭೇಟಿ ನೀಡುತ್ತಾರೆ. ಆದರೆ ಮಹಿಳೆಯರ ಭೇಟಿಯನ್ನು ನಿಷೇಧಿಸಿ ಈ ಪ್ರತಿಭಟನೆ ನಡೆಸುತ್ತೇವೆ ಎಂದು ದೇಸಾಯಿ ತಿಳಿಸಿದ್ದಾರೆ.

Write A Comment